ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್​ಘಡ್​ ಗರ್ವನರ್​ ಬಲರಾಮ್​ ಜೀ ನಿಧನ…!

ರಾಯ್​ಪುರ​​ : ಛತ್ತೀಸ್​ಘಡ್ ಗರ್ವನರ್​  ಬಲರಾಮ್​ ಜೀ ದಾಸ್ ಟಂಡನ್​​ ಇಂದು ಕೊನೆಯುಸಿರೆಳೆದಿದ್ದಾರೆ. 90 ವರ್ಷದ ಬಲರಾಮ್​ ಜೀಯವರಿಗೆ  ತೀವ್ರ ಅನಾರೋಗ್ಯದ ಕಾರಣ  ಆಸ್ಪತ್ರೆಗೆ ದಾಖಲಿಸಿದ್ದರು,  ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಹಲವು ದಿನಗಳಿಂದ ಬಲರಾಮ್​ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು,  ನೆನ್ನೆ ಅವರನ್ನು ರಾಯ್​ಪುರದಲ್ಲಿರುವ ಅಂಬೇಡ್ಕರ್​ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಲರಾಮ್​ ಜೀ ದಾಸ್​ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು..

ಜನ್​ ಸಂಗ್​​ ಸಂಸ್ಥಾಪಕ ಸದಸ್ಯರಾದ ಟಂಡನ್​ ನಂತರದಲ್ಲಿ ಜುಲೈ 2014 ರಲ್ಲಿ ಛತ್ತೀಸ್​ಘಡ್​ ನಲ್ಲಿ ಗವರ್ನರ್ ಆಗಿದ್ದರು. ರಾಜಕೀಯ ಜೀವನದಲ್ಲಿ ಅವರು ಪಂಜಾಬ್​ನ ಉಪಮುಖ್ಯಮಂತ್ರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಹಾಗೂ ಆರು ಬಾರಿ ಎಂಎಲ್​ಎ ಕೂಡ ಆಗಿದ್ದರು, ಮತ್ತು 1975 ರಿಂದ 1977ರವರೆಗೆ ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದರು.

Leave a Reply

Your email address will not be published.