ಎಲ್ಲೇ ಸ್ಪರ್ಧೆ ಮಾಡಿದ್ರು ಸೋಲ್ತಿನಿ ಅಂತ ಗೊತ್ತಾಗಿ ಬೀದರ್​ನಿಂದ ರಾಗಾ ಕಣಕ್ಕೆ : ಬಿಎಸ್​ವೈ

ಹುಬ್ಬಳ್ಳಿ : ಯಾವುದೇ ರಾಜ್ಯದಲ್ಲಿ ಸ್ಪರ್ಧೆ ಮಾಡಿದರೂ ನಾನು ಸೋಲ್ತಿನಿ ಅಂತ ಗೊತ್ತಾಗಿದ್ದರು ರಾಹುಲ್ ಗಾಂಧಿ ಬೀದರ್​ನಿಂದ ಸ್ಪರ್ಧೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಹುಲ್ ಗಾಂಧಿ ಬೀದರ್​ನಿಂದ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ರಾಹುಲ್ ಗಾಂಧಿಯವರಿಗೆ ನಾನು ದೇಶದ ಯಾವುದೇ ರಾಜ್ಯದಿಂದ ಸ್ಪರ್ಧಿಸಿದರು, ಸೋಲುವುದು ಖಚಿತ ಎಂಬುದು ಮನವರಿಕೆಯಾಗಿದೆ. ಆದರು ಅವರು ಬೀದರ್ ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.ಕರ್ನಾಟಕದ ಜನರು ರಾಹುಲ್ ಬೀದರ್​ ಸ್ಪರ್ಧೆಯನ್ನು  ಖಂಡಿತವಾಗಿಯೂ ತಿರಸ್ಕರಿಸುತ್ತಾರೆ. ಅಲ್ಲದೇ ಕಾಂಗ್ರೆಸ್ ಸದ್ಯ ಮುಳುಗುತ್ತಿದೆ ಎಂದು ಅವರೇ ಹೇಳಿಕೆ ಕೊಟ್ಟಿದ್ದಾರೆ.

ರಾಜ್ಯದ ಕಾಂಗ್ರೆಸ್ ಮುಖಂಡರುಗಳು ರಾಹುಲ್ ಗಾಂಧಿಯವರನ್ನು ಕರ್ನಾಟಕ ರಾಜಕೀಯದಲ್ಲಿ ಮಾದರಿಯಂತೆ ಭಾವಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಗಿ ಬಿಎಸ್​ವೈ ಮಾತನಾಡಿದ್ದಾರೆ.

 

 

Leave a Reply

Your email address will not be published.