ಕೊಪ್ಪಳ : ಶಿಕ್ಷಕನ ಅಮಾನತು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ….!

ಕೊಪ್ಪಳ : ಶಿಕ್ಷಕನ ಅಮಾನತ್ತು ಖಂಡಿಸಿ ವಿದ್ಯಾರ್ಥಿಗಳು ಘೋಷಣೆ ಕೂಗಿ  ಪ್ರತಿಭಟನೆ ನಡೆಸುತ್ತಿರುವ ಘಟನೆ  ಕೊಪ್ಪಳದ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಬಳಸಿಕೊಂಡಿದ್ದ ಶಿಕ್ಷಕ ಚಂದ್ರಶೇಖರ್​ರನ್ನು ಅಮಾನತ್ತು ಮಾಡಲು ಆದೇಶ ಹೋರಡಿಸಲಾಗಿದೆ ಆದರೆ ಆ ಆದೇಶವನ್ನು ರದ್ದು ಮಾಡುವಂತೆ ಒತ್ತಾಯಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಚಂದ್ರಶೇಖರ ಕಳೆದ ವಾರ ಶಾಲಾ ವಿದ್ಯಾರ್ಥಿಗಳನ್ನ ಬಟ್ಟೆ ತೊಳೆಯಲು ಕಾರ್ಮಿಕರಂತೆ ಬಳಸಿಕೊಂಡಿದ್ದರು, ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದಂತೆ ಬಿಇಓ ಶಾಲೆಗೆ ಭೇಟಿ ನೀಡಿ, ಸತ್ಯಾಸತ್ಯತೆ ತಿಳಿದು ಶಿಕ್ಷಕ  ಸಸ್ಪೆಂಡ್ ಮಾಡಿದ್ದರು. ಆದರೆ ಇಂದು ನೂರಾರು ವಿದ್ಯಾರ್ಥಿಗಳು  ತರಗತಿಯನ್ನ ಬಹಿಷ್ಕರಿಸಿ ಅಮಾನತ್ತಾದ ಶಿಕ್ಷಕನ ಪರವಾಗಿ ವಿದ್ಯಾರ್ಥಿಗಳ ‘ಸುಳ್ಳು ಆರೋಪಗಳಿಂದ ನಮ್ಮ ಶಿಕ್ಷಕರ ಅಮಾನತು ರದ್ದುಗೊಳಿಸಲಿ’.  ‘ನಮ್ಮ ಶಿಕ್ಷಕರನ್ನು ನಮಗೆ ಮರಳಿ ಕೊಡಿ ಎಂದು ವಿದ್ಯಾರ್ಥಿಗಳು’  ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.

 

Leave a Reply

Your email address will not be published.