ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ : ಶೋಭಾ ಕರಂದ್ಲಾಜೆ

ಗದಗ : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅನೇಕ ಮಕ್ಕಳ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಕಣ್ ಮುಚ್ಚಿಕುಳಿತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಗದಗನಲ್ಲಿ ಮಾತನಾಡಿದ ಶೋಭಾ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದ ಕ್ರಿಮಿನಲ್ ಅಮಾನ್ಮೆಂಟ್ ಬಿಲ್ 2018 ಅನ್ನು ಕರ್ನಾಟಕದಲ್ಲಿ ಇನ್ನಷ್ಟು ಘಟ್ಟಿಗೊಳಿಸಬೇಕು. ಜೊತೆಗೆ ಅಪರಾಧಿಗಳಿಗೆ ಕಾನೂನು ಭಯ ಹುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕೆಂದ್ರ ಶೋಭಾ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಹಿನ್ನಲೆಯಲ್ಲಿ, ಅಧಿಕಾರದ ಲಾಲಸೆಗೆ ಈಗಾಗಲೇ ಬೆಂಗಳೂರು ಬಲಿಯಾಗಿದೆ.   ಅಭಿವೃದ್ಧಿ ಕೆಲಸಗಳಾಗದೆ ಭ್ರಷ್ಟಾಚಾರದ ಕೂಪವಾಗಿದೆ ಬೆಂಗಳೂರು. ವಿಧಾನ ಸಭೆಯಲ್ಲೂ ದೋಸ್ತಿ ಗದಗನಲ್ಲಿ ಕುಸ್ತಿ ಇದು ನಿಮ್ಮ ನೀತಿನಾ? ನಿಮ್ಮದೋಸ್ತಿ ಎಲ್ಲಿ ವರೆಗೆ ಎಂಬುದನ್ನ ಸ್ಪಷ್ಟಪಡಿಸಬೇಕು ಅಂತ ಸಮ್ಮಿಶ್ರ ಸರ್ಕಾರಕ್ಕೆ ಸಂಸದೆ ಶೋಭಾ ಪ್ರಶ್ನೆಮಾಡಿದ್ರು..

Leave a Reply

Your email address will not be published.

Social Media Auto Publish Powered By : XYZScripts.com