ಸೂಪರ್ ಸಿಎಂ ರೇವಣ್ಣ ನಿಂಬೆಹಣ್ಣು ಇಟ್ಟುಕೊಂಡು ವಿಧಾನಸಭೆ ಪ್ರವೇಶ ಮಾಡ್ತಾರೆ : ಆರ್.ಅಶೋಕ್

ಕೊಡಗು : ‘ ರಾಜ್ಯ ಸರ್ಕಾರ ವಾಸ್ತು ಪ್ರಕಾರವಾಗಿ ನಡೆಯುತ್ತಿದೆ ‘ ಎಂದು ಮಡಿಕೇರಿಯಲ್ಲಿ ಬಿಜೆಪಿ ಮುಖಂಡ ಆರ್ .ಅಶೋಕ್ ಹೇಳಿಕೆ ನೀಡಿದ್ದಾರೆ. ‘ ಹೆಚ್.ಡಿ ರೇವಣ್ಣ ಲಿಂಬೆ ಹಣ್ಣು ಇಟ್ಟುಕೊಂಡು ವಿಧಾನಸಭಾ ಪ್ರವೇಶ ಮಾಡ್ತಾರೆ, ಈ ಸರ್ಕಾರದಲ್ಲಿ ರಾಹುಕಾಲದಲ್ಲಿ ಮಸೂದೆಗಳು ಅಂಗೀಕಾರ ಆಗಲ್ಲ, ಇದು ವಾಸ್ತುಪರ-ವಾಸ್ತು ದೋಷವಿರೋ ಸರ್ಕಾರ ‘ ಎಂದಿದ್ದಾರೆ.

‘ ವಾಸ್ತು ದೋಷವೆಂದು ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ಎಂಟ್ರಿ ಕೊಟ್ಟಿಲ್ಲ. ಸೂಪರ್ ಸಿಎಂ ಹೆಚ್.ಡಿ ರೇವಣ್ಣ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ‘ ಎಂದು ಮಡಿಕೇರಿಯಲ್ಲಿ ಆರ್ ಅಶೋಕ್ ಹೇಳಿದ್ದಾರೆ.

Leave a Reply

Your email address will not be published.