ಮುಂದಿನ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ : ಪ್ರತಾಪ್ ಸಿಂಹ

ಮೈಸೂರು : ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡು ಪ್ರತಿಕ್ರಿಯೆ ನೀಡಿದ್ದಾರೆ. ‘ ನೀವೇ ಹೋಗಿ ಬೇಕಾದ್ರೆ ಹೋಗಿ ಮಹಾರಾಜ ಯದುವೀರ್ ಅವರನ್ನ ಕೇಳಿ, ಮುಂದಿನ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ’ ಎಂದಿದ್ದಾರೆ.

‘ ನಿಮ್ಮ ಪಕ್ಷದವರೆ ನಿಮಗೆ ಟಿಕೆಟ್ ತಪ್ಪಿಸಲು ಪ್ರಯತ್ನ ಪಡ್ತಿದ್ದಾರಾ..? ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ. ಮೋದಿಯವರೆ ಬಂದು ಉತ್ತಮ ಕೆಲಸ ಮಾಡಿದ್ದಿಯಾ ಬೇಟಾ ಅಂತ ಹೇಳಿ ಹೋಗಿದ್ದಾರೆ. ಮೋದಿಗಿಂತ ದೊಡ್ಡವರು ಯಾರಿದ್ದಾರೆ..?

ದೆಹಲಿಯ ಜಂತರ್ ಮಂತರ್ ನಲ್ಲಿ ದುಷ್ಕರ್ಮಿಗಳು ಸಂವಿಧಾದ ಪ್ರತಿ ಸುಟ್ಟ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ಸಂವಿಧಾನದ ಪರ ಇರೋದು ಪ್ರಧಾನಿ ಮೋದಿ ‘ ಎಂದಿದ್ದಾರೆ.

ಇನ್ನು ಅನಂತಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ‘ ಸಂಸತ್ ನಲ್ಲೇ ನಿಲ್ಲಿಸಿ ಕ್ಷಮೆಯನ್ನ ಕೇಳಿಸಿದ್ದೇವಿ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಖಂಡಿಸಿದ್ದಾರೆ. ಇದಕ್ಕಿಂತ ಬೇರೆ ನಾನು ಏನು ಹೇಳಬೇಕು ಗೊತ್ತಾಗ್ತಿಲ್ಲ ‘ ಎಂದು ಮೈಸೂರು ಪತ್ರಕರ್ತರ ಭವನದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.