ಕೋಲ್ಕತಾ : ಲೋಕಸಭೆ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ವಿಧಿವಶ….. 

ಕೋಲ್ಕತ : ಲೋಕಸಭೆಯ ಮಾಜಿ ಸ್ಪೀಕರ್‌  89ವರ್ಷದ  ಸೋಮನಾಥ್ ಚಟರ್ಜಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಟರ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿತ್ತು, ಮತ್ತು ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು.

ಚಟರ್ಜಿ ಹತ್ತು ಬಾರಿ ಸಿಪಿಎಂನಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಲೋಕಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಿಂದ 2009ರ ವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1968ರಲ್ಲಿ ಸಿಪಿಎಂ ಸೇರಿದ್ದ ಅವರು, 2008ರ ವರೆಗೂ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com