ಡಿವೋರ್ಸ್ ಹಂತಕ್ಕೆ ತಲುಪಿದ ಪ್ರೇಮವಿವಾಹ : ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆ..!

ತುಮಕೂರು : ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುರುವೇಕೆರೆ ತಾಲೂಕಿನ ಹಳ್ಳದ ಹೊಸಹಳ್ಳಿ ಬಳಿ ನಡೆದಿದೆ. ಮೋಹನ್ ಗೌಡ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ತಿಂಗಳ ಹಿಂದೆ ಯುವತಿಯನ್ನ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದ. ಮದುವೆಯಾದ 15 ದಿನಗಳ ನಂತರ ಯುವತಿ ಪೊಷಕರು ಯವತಿಗೆ ಮನವೊಲಿಸಿ ಕರೆದುಕೊಂಡು ಹೋಗಿದ್ದರು. ಯುವಕ ಮೋಸ ಮಾಡಿ ಕರೆದುಕೊಂಡು ಹೋಗಿದ್ದಾನೆ ಎಂದು ತುರುವೇಕೆರೆ ಠಾಣೆಗೆ ದೂರು ನೀಡಿದ್ದಳು.

ಪ್ರೇಮ ವಿವಾಹ ಡಿವೋರ್ಸ್ ಹಂತಕ್ಕೆ ತಲುಪಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ಫೇಸ್ಬುಕ್ ಲೈವ್ ನಲ್ಲಿ ವೈರಲ್ ಆಗಿದೆ. ಮನೆಯ ಕೊಠಡಿಯಲ್ಲಿ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುರುವೇಕರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com