Cricket : ಇಂಗ್ಲೆಂಡ್ ಗೆ ಇನ್ನಿಂಗ್ಸ್ ಹಾಗೂ 159 ರನ್ ಗೆಲುವು : ಕೊಹ್ಲಿ ಪಡೆಗೆ ಮುಖಭಂಗ

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಭಾರತದ ವಿರುದ್ಧ ಇನ್ನಿಂಗ್ಸ್ 159 ರನ್ ಅಂತರದ ಗೆಲುವು ಸಾಧಿಸಿದೆ. ಕೊಹ್ಲಿ ಪಡೆ ಭಾರೀ ಮುಖಭಂಗ ಎದುರಿಸಿದ್ದು, ಈ ಮೂಲಕ ಜೋ ರೂಟ್ ಪಡೆ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ರವಿವಾರ ನಡೆದ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 130ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ರವಿಚಂದ್ರನ್ ಅಶ್ವಿನ್ 33 ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 26 ರನ್ ಗಳಿಸಿದರು. ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿಯೂ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ ಶೂನ್ಯಕ್ಕೆ ಔಟಾದರು.

ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್ 4, ಸ್ಟುವರ್ಟ್ ಬ್ರಾಡ್ 4 ಹಾಗೂ ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಬಾರಿಸಿ 4 ವಿಕೆಟ್ ಪಡೆದ ಕ್ರಿಸ್ ವೋಕ್ಸ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published.

Social Media Auto Publish Powered By : XYZScripts.com