ಬಾಗಲಕೋಟೆ : ಸಾಲಬಾಧೆ ತಾಳಲಾರದೇ ಅನ್ನದಾತ ನೇಣಿಗೆ ಶರಣು…!

ಬಾಗಲಕೋಟೆ : ಸಾಲಬಾಧೆ ತಾಳಲಾರದೇ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ.

48 ವರ್ಷದ ರಾಮಪ್ಪ ಆನಗುದ್ದಿ ಮೃತ ರೈತ ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 50 ಸಾವಿರ, ಕೆವಿಜಿ ಬ್ಯಾಂಕ್ ನಲ್ಲಿ 40 ಸಾವಿರ, ಕೈಸಾಲ ಎರಡುವರೆ ಲಕ್ಷ , ಒಟ್ಟು ಮೂರು ಲಕ್ಷ 40 ಸಾವಿರ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲ ತೀರಿಸಲಾಗದೇ  ರೈತ ತಮ್ಮ ಹೊಲದಲ್ಲಿನ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.

ಒಂದೂವರೆ ಎಕರೆ ಭೂಮಿಯಲ್ಲಿ ಜೋಳ ಬೆಳೆದಿದ್ದ ರೈತ ಬೆಳೆ ಸರಿಯಾಗಿ ಬಾರದೆ ನಷ್ಟವಾಗಿತ್ತು ಇದರಿಂದ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಸ್ಥಳಕ್ಕೆ ಲೋಕಾಪುರ ಠಾಣಾ ಪೊಲೀಸರು ಭೇಟಿ ನೀಡಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.