ಸೋಷಿಯಲ್ ಮೀಡಿಯಾದಲ್ಲಿ ಈಗ ‘ಬೀಗಬೇಡ‘ ಹವಾ : ಫೇಮಸ್ ಆಯ್ತು ಪ್ರಾಣೇಶರ ಡೈಲಾಗ್…!

ಸಾಮಾಜಿಕ ತಾಣದಲ್ಲಿ ಒಂದು ಫೋಟೋ ಅಥವಾ ಡ್ಯಾನ್ಸ್​ನಿಂದ ಫೇಮಸ್ ಆದವರು ಹಾಗೂ ಟ್ರೋಲ್ ಆಗಿದ್ದನ್ನು ನೋಡಿದ್ದೇವೆ ಆದರೆ ಇತ್ತಿಚೇಗೆ ಬೀಗಬೇಡ ಎಂಬ ಪದ ಸಾಮಾಜಿಕ ತಾಣದಲ್ಲಿ ಹೊಸ
 Image result for ಬೀಗಬೇಡ
ಬೀಗಬೇಡ, ಬೀಗಬೇಡ ಎಂದು ವಾಟ್ಸಪ್ ಸ್ಟೇಟಸ್, ಫೇಸ್​ ಬುಕ್​, ನಲ್ಲಿ ಪೋಸ್ಟ್ ಗಳ ಮೇಳೆ ಪೋಸ್ಟ್ ಗಳು ಶೇರ್ ಮಾಡುತ್ತಿದ್ದು. ಕೆಲವೊಬ್ಬರಿಗೆ ನಗು ತರಿಸಿದ್ದರು, ಯಾರದ್ದೋ ಸಿಟ್ಟು, ಇನ್ಯಾರದ್ದೋ ಅಸಮಾಧಾನ, ಮತ್ಯಾರದ್ದೋ ಕಳಕಳಿ ಎಲ್ಲವನ್ನೂ ಪೋಣಿಸಲು ದಾರವಾಗಿದ್ದು, ಈ ಪದ ಕೆಲವರಿಗೆ  ಕಿರಿಕಿರಿ ಎಂದೆನಿಸುವ ಮಟ್ಟಿಗೆ ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿರುವ ಪದವಿದು. ಅಂದಹಾಗೆ ಇಂಥದ್ದೊಂದು ಪದಕ್ಕೆ ಜೀವ ತುಂಬಿದ್ದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್‌.
Related imageImage result for ಬೀಗಬೇಡ
 ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​ ಹೇಳಿದ ಸಾಲುಗಳು. ಜೀವನಕ್ಕೆ ತೀರಾ ಹತ್ತಿರವಾದ ಈ ಸಾಲುಗಳು ಟ್ರೆಂಡ್ ಕ್ರಿಯೇಟ್ ಮಾಡಿತ್ತು.  ‘ಎತ್ತರದಲ್ಲಿದ್ದೆನೆಂದು ಬೀಗಬೇಡ, ನಕ್ಷತ್ರಗಳು ಕೆಳಗೆ ಊರಳಿದ್ದನ್ನು ನೋಡಿದ್ದೇನೆ‘ ‘ನನ್ನಲ್ಲಿ ಆಳವಾದ ಪಾಂಡಿತ್ಯವಿದೆ ಎಂದು ಗರ್ವಿಸಬೇಡ, ಬತ್ತುವ ಸಮುದ್ರವನ್ನು ನಾನು ನೋಡಿದ್ದೇನೆ.ಎಂಬ ಡೈಲಾಗ್ ಎಲ್ಲರೂ ಕೇಳೇ ಇರ್ತಿರಾ. ಆದ್ರೆ ಈ ಪಂಚಿಂಗ್ ಡೈಲಾಗ್​ಗಳ ಶೈಲಿಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜನ ತಮ್ಮದೇ ಡೈಲಾಗ್​ಗಳನ್ನು ಸೃಷ್ಟಿಸಿ ಹರಿಬಿಡುತ್ತು, ಕೆಲವರು ನಕ್ಕು ಸುಮ್ಮನಾದರೆ ಇನ್ನೂ ಕೆಲವರು ಅದನ್ನೇ ಟ್ರೋಲ್ ಮಾಡುತ್ತಿದ್ದಾರೆ.
Image result for ಬೀಗಬೇಡ
ತಮ್ಮ ಮಾತುಗಳು ಸಾಮಾಜಿಕ ತಾಣಗಳಲ್ಲಿ ಅವರವರ ಇಷ್ಟಕ್ಕೆ ತಕ್ಕಂತೆ ಬದಲಾಗಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸುವ ಪ್ರಾಣೇಶ್‌ ಅವರು, ‘ಯಾವುದೇ ಆದರ್ಶ, ಮೌಲ್ಯಗಳನ್ನು ತಿರುಚಬಾರದು. ಅದರ ಒಳಾರ್ಥವನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದ ಮೌಲ್ಯಗಳನ್ನು ತಮ್ಮ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಲು ಹಾಸ್ಯಮಯವಾಗಿ ಬಳಸಿಕೊಳ್ಳುತ್ತಿರುವುದು ಸಮಂಜಸವಲ್ಲ’ ಎಂದು ತಿಳಿಸಿದ್ದಾರೆ.

ಬೀಗಬೇಡ ಸಾಲುಗಳು:

ಇವತ್ತು ಹೆಂಡ್ತಿ ಕಾಲು ಹಿಡಿತಾಳೆ ಅಂತ ಬೀಗಬೇಡ.ದಿನಾ ಹೆಂಡ್ತಿ ಕಾಲು ಒತ್ತಿದ್ದು ಕಂಡಿದ್ದಿನಿ.

ಮೊಬೈಲ್ ಚಾರ್ಜ್ 100% ಇದೆ ಎಂದು ಬೀಗಬೇಡ..ಚಾರ್ಜ್ ಗೆ ಹಾಕಿ ಸ್ವಿಚ್ ಆನ್ ಮಾಡದೇ ಇದ್ದವರನ್ನಾ ನೋಡಿದ್ದೀನಿ….

ಹೊಸಾ ಕಾರ್ ತಗೊಂಡೆ ಅಂತ ಮೆರೀಬೇಡ..ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ…

ಕೊನೆಯುಸಿರಿರು ಇರೋವರೆಗೂ ಜೊತೆಗಿರ್ತಾಳೆ ಅಂತ ಬೀಗಬೇಡ. ಸಣ್ಣ ಜಗಳಕ್ಕೆ ಮುನಿಸಿಕೊಂಡು ಜೀವನವನ್ನೆ ನರಕ ಮಾಡಿ ಹೋದವರನ್ನು ನಾವು ಕಂಡಿದ್ದೇವೆ……

ಕೋಟಿ ಸಂಪಾದಿಸಿನೆಂದು ಬೀಗಬೇಡ , ಸಂಪತ್ತು ಇದ್ದರೂ 6×3 ಅಡಿಗಾಗಿ ಕೋರ್ಟ್ ನಲ್ಲಿ ಬೇಡಿದವರನ್ನು ನೋಡಿದ್ದೇವೆ!

Leave a Reply

Your email address will not be published.

Social Media Auto Publish Powered By : XYZScripts.com