ಮಾಜಿ ಸಿಎಂಗೆ ಹುಟ್ಟುಹಬ್ಬದ ಸಂಭ್ರಮ : ಸಿದ್ದರಾಮಯ್ಯಗೆ ವಿಶ್ ಮಾಡಿದ ಹೆಚ್​ಡಿಕೆ

ಬೆಂಗಳೂರು : ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ 70ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಟ್ವೀಟರ್​ನಲ್ಲಿ ಶುಭಾಶಯ ಕೊರಿದ್ದಾರೆ. ಸಿದ್ದರಾಮಯ್ಯ ಮೈಸೂರಿನ ಅವರು ವರುಣ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ ಆಗಸ್ಟ್ 12, 1948ರಂದು ಜನಿಸಿದ್ದಾರೆ.

ಸಿದ್ದರಾಮಯ್ಯರವರ ಹುಟ್ಟುಹಬ್ಬಕ್ಕೆ ಶುಭಾಶಯ ಕೊರಿದ ಸಿಎಂ ಎಚ್‍ಡಿಕೆ, ಮಾಜಿ ಮುಖ್ಯಮಂತ್ರಿ, ಹಿರಿಯ ಮುಖಂಡ ಶ್ರೀ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೇವರು ದೀರ್ಘ ಆಯಸ್ಸು ಹಾಗೂ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಮ್ಮಿಶ್ರ ಸರ್ಕಾರವನ್ನು ಮುಂದೆ ಕೊಂಡೊಯ್ಯುವಲ್ಲಿ ಅವರ ಸಲಹೆಗಳು ಅಮೂಲ್ಯವಾದದ್ದು. ರಾಜ್ಯವನ್ನು ಪ್ರಗತಿ ಹಾಗೂ ಸಮೃದ್ಧಿಯತ್ತ ಕೊಂಡೊಯ್ಯುವಲ್ಲಿ ಅವರ ಸಲಹೆಗಳು ಮುಖ್ಯ ಎಂದು ಟ್ವೀಟರ್ ಮೂಲಕ ಶುಭಾಷಯ ಕೊರಿದ್ದಾರೆ.

Leave a Reply

Your email address will not be published.