2ನೇ ಇನ್ನಿಂಗ್ಸ್ ಶುರು ಮಾಡಿದ್ದ ರಾಘಣ್ಣ : ಡಿಫ್​ರೆಂಟ್ ಲುಕ್​ನಲ್ಲಿ ಮತ್ತೆ ಬೆಳ್ಳಿತೆರೆಗೆ…!

ಬೆಂಗಳೂರು : ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 14 ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 2004ರಲ್ಲಿ ಬಂದ ‘ಪಕ್ಕದ ಮನೆ’ ಹುಡುಗಿ ಚಿತ್ರ ಅವರ ಕೊನೆಯ ಸಿನಿಮಾ ಆಗಿತ್ತು. ಇದೀಗ ಮತ್ತೆ ಡಿಫರೆಂಟ್​ ಲುಕ್ ನಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

 raghavendra rajkumars Ammana Mane movie first look released
ರಾಘವೇಂದ್ರ ರಾಜಕುಮಾರ್ ಅವರು ‘ಅಮ್ಮನ ಮನೆ’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರವನ್ನು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ರಾಘವೇಂದ್ರ ರಾಜಕುಮಾರ್ ಅವರ ಹುಟ್ಟಿದ ದಿನವಾದ ಆಗಸ್ಟ್ 15ರಂದು ಪ್ರಾರಂಭವಾಗಲಿದೆ. ಸದ್ಯ ಈ ಚಿತ್ರದ ಲುಕ್​ಗಳು ರಿಲೀಸ್​ ಆಗಿವೆ. ಇವುಗಳಲ್ಲಿ ಸಾಲ್ಟ್ ಅಂಡ್ ಪೇಪರ್ ಲುಕ್​​ನಲ್ಲಿ ರಾಘಣ್ಣ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com