ಶಿರಸಿ : ಬಸ್, ಲಾರಿ ಹಾಗೂ ಓಮಿನಿ ಮಧ್ಯ ಅಪಘಾತ : ನಾಲ್ವರಿಗೆ ಗಾಯ..

ಬಸ್, ಮಾರುತಿ ಓಮಿನಿ ಹಾಗೂ ಲಾರಿಯ‌ ಮಧ್ಯೆ ಅಪಘಾತ ಸಂಭವಿಸಿ ಓಮಿನಿ ಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿರುವ ಘಟನೆ ರವಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 63 ಬಿಸಗೋಡ ಕ್ರಾಸ್ ಬಳಿ ಸಂಭವಿಸಿದೆ.

ದಾಂಡೇಲಿ- ಹೊನ್ನಾವರ ಬಸ್ ಯಲ್ಲಾಪುರ ಕಡೆಗೆ ಬರುತ್ತಿತ್ತು, ಓಮಿನಿಯೊಂದನ್ನು ಓವರ್ ಟೇಕ್ ಮಾಡಿಕೊಂಡು ಎದುರಿನಿಂದ ಬಂದ ಲಾರಿಯ ಚಾಲಕ ಬಸ್ಸಿಗೆ ಅಪಘಾತ ಪಡಿಸಿದ್ದಾನೆ. ನಂತರ ಬಸ್ ಚಾಲಕ ಬಸ್ಸಿನ‌ ಮೇಲೆ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಮಾರುತಿ ಓಮಿನಿಗೆ ಅಪಘಾತ ಪಡೆಸಿದ್ದಾನೆ ಎನ್ನಲಾಗಿದೆ.

ಮಾರುತಿ ಓಮಿನಿ ಪ್ರಯಾಣಿಕರಾದ ಚಂದ್ರು ಮಹದೇವಪ್ಪ ನವಲಗುಂದ (19), ಮಂಜುನಾಥ ಶಾಂತಪ್ಪ ಕುಳಬಾಪುರ (25), ನಾಗರಾಜ ನೀಲಪ್ಪ ಡುಮ್ಮನವರ (25), ಶ್ರೀಕಾಂತ ದುರ್ಗಪ್ಪ ಮತ್ತುರು (22) ಗಾಯಗೊಂಡವರಾಗಿದ್ದಾರೆ. ಇವರು ಶಿಗ್ಗಾಂವದಿಂದ ಸಾತೋಡ್ಡಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಾಲ್ಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾರಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷದ‌ ಚಾಲನೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕ ಲಾಡಸಿಂಗ ಪರಮಾರ (47) ಈತನನ್ನು ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಡಾ ಮಂಜುನಾಥ ನಾಯಕ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ಪರಿಶೀಲನೆ ನಡೆಸಿದರು.

ನಿನ್ನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಾಟ್ ದಲ್ಲಿ ಕಂಟೇನರ್ ಲಾರಿ ಹಾಗೂ ಬಸ್ ಮಧ್ಯ ಅಪಘಾತ ಸಂಭವಿಸಿ 15 ಜನ ಗಾಯಗೊಂಡಿದ್ದರು. ಇಂದು ರವಿವಾರ ಮಾರುತಿ ಒಮಿನಿ ಲಾರಿ ಹಾಗೂ ಬಸ್ ಮಧ್ಯ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಮತ್ತೆ ಮತ್ತೆ ಸರಣಿ ಅಪಘಾತಗಳು ಸಂಭವಿಸುತ್ತಿರುವುದು ಸಾರ್ವಜನಿಕರನ್ನು ಆತಂಕಕ್ಕೆ ಈಡು ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com