Nobel Awardee : ಸಾಹಿತಿ ವಿಎಸ್ ನೈಪಾಲ್ ಇನ್ನಿಲ್ಲ ….

ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ವಿಎಸ್ ನೈಪಾಲ್ (85) ಕೊನೆಯುಸಿರೆಳೆದಿದ್ದಾರೆ ಎಂದು ಬ್ರಿಟಿಷ್ ಪ್ರೆಸ್ ಅಸೋಸಿಯೇಷನ್ ಗೆ ನೈಪಾಲ್ ಪತ್ನಿ ಮಾಹಿತಿ ನೀಡಿದ್ದಾರೆ.
001ರಲ್ಲಿ 1ಮಿಲಿಯನ್ ಡಾಲರ್ ಮೊತ್ತದ ನೊಬೆಲ್ ಸಾಹಿತ್ಯ ಪಾರಿತೋಷಕವನ್ನು ಪಡೆದಿದ್ದ ಟ್ರಿನಿಡಾಡ್ ಸಂಜಾತ ನೈಪಾಲ್ ಅವರು, 1971ರಲ್ಲಿ ಬೂಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. 1990ರಲ್ಲಿ ಕ್ವೀನ್ ಎಲಿಜಬೆತ್ ನೈಪಾಲ್ ಅವರಿಗೆ ‘ನೈಟ್ ಹುಡ್’ ಗೌರವ ನೀಡಿದ್ದರು.

ಬೆಂಡ್ ಇನ್ ದಿ ರಿವರ್, ಎ ಹೌಸ್ ಆಫ್ ಮಿ. ಬಿಸ್ವಾಸ್ ಸೇರಿದಂತೆ 30ಕ್ಕೂ ಅಧಿಕ ಕೃತಿಗಳನ್ನು ಹೊರತಂದಿತ್ತರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಶಿಪ್ ಪಡೆದು ಇಂಗ್ಲೀಷ್ ಸಾಹಿತ್ಯ ಅಧ್ಯಯನ ಮಾಡಿದರು. 1966ರಲ್ಲಿ ಮೊದಲ ಪತ್ನಿ ಪ್ಯಾಟ್ ನಿಧನರಾದ ಬಳಿಕ ಪಾಕಿಸ್ತಾನಿ ಪತ್ರಕರ್ತ್ ನಾದಿರಾ ಅವರನ್ನು ಮದುವೆಯಾದರು.

ಭಾರತದ ರಾಜಕೀಯ, ಭ್ರಷ್ಟಾಚಾರ, ಸಾಮ್ರಾಜ್ಯ ಶಾಹಿ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಅಭಿಪ್ರಾಯಗಳನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com