ಬೆಳ್ಳಿತೆರೆ ಮೇಲೆ ‘ಭಾರತದ ಮೊದಲ ಮಹಿಳಾ ಶಿಕ್ಷಕಿ‘ಯ ಜೀವನಾಧಾರಿತ ಚಿತ್ರ….!

ಬೆಂಗಳೂರು : ಬ್ರಿಟಿಷರಿಂದ ‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂಬ ಬಿರುದನ್ನು ಪಡೆದಿರುವ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರ ‘ಸಾವಿತ್ರಿಬಾಯಿ ಪುಲೆ-ಪ್ರೈಡ್ ಆಫ್ ನೇಶನ್’ ಇಂದು ರಾಜ್ಯಾದ್ಯಂತ ತೆರೆ ಅಪ್ಪಳಿಸಲಿದೆ.

ಸಾವಿತ್ರಿಬಾಯಿ ಅವರ ಜೀವನಚರಿತ್ರೆ ಸಿನಿಮಾವಾಗುತ್ತಿದ್ದು, ಸಾವಿತ್ರಿಯವರ ಪಾತ್ರವನ್ನು ತಾರಾ ನೆರೆವೆರಿಸುತ್ತಿದ್ದು, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿದ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದ ಮಹಾನ್ ಸಾಧಕಿಯಾಗಿದ್ದಾರೆ. ಅವರ ದಿಟ್ಟ ಹೋರಾಟದ ಬದುಕು-ಬವಣೆ ಕೇಳುವ ಮೂಲಕ ನಮ್ಮಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ತುಂಬಿದ್ದಾರು ಹಾಗೂ ‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂಬ ಬಿರುದನ್ನು ಬ್ರಿಟಿಷರಿಂದ ಪಡೆದಿದ್ದರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

http://www.justkannada.in/wp-content/uploads/2018/08/savi.jpg

ಬ್ರಿಟಿಷರ ಆಳ್ವಿಕೆ ಸಂದರ್ಭದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದರೆ ಅದು ಸವಾಲಿನ ಸಂಗತಿ. ಅಂಥ ಕೆಲಸವನ್ನು ಮಾಡಿ ತೋರಿಸಿದವರು ಸಾವಿತ್ರಿಬಾಯಿ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು, ಮಧ್ಯಾಹ್ನ ಊಟ ನೀಡಿದರೆ ಆ ನೆಪದಲ್ಲಾದರೂ ಮಕ್ಕಳು ಶಾಲೆಗೆ ಬರುತ್ತಾರೆ ಎಂಬುದನ್ನು ಅರಿತಿದ್ದ ಅವರು, ದೇಣಿಗೆ ಸಂಗ್ರಹಿಸಿ ಶಾಲೆಯಲ್ಲಿ ಊಟ ಹಾಕುತ್ತಿದ್ದರು. ಇಂಥ ಮಹಾನ್ ವ್ಯಕ್ತಿಯೇ ಸಾವಿತ್ರಿಬಾಯಿ ಫುಲೆ.

Leave a Reply

Your email address will not be published.

Social Media Auto Publish Powered By : XYZScripts.com