ಮೈಸೂರು : ಕರ್ನಾಟಕದಲ್ಲಿ ಪ್ರಾಂತೀಯ ಪಕ್ಷವನ್ನು ಪ್ರಬಲವಾಗಿ ಕಟ್ಟುತ್ತೇನೆ : ಎಚ್​ ವಿಶ್ವನಾಥ್

ಮೈಸೂರು : ಕರ್ನಾಟಕದಲ್ಲಿ ಪ್ರಾಂತೀಯ ಪಕ್ಷವನ್ನ ಪ್ರಬಲವಾಗಿ ಕಟ್ಟುತ್ತೇನೆ. ಇದಕ್ಕಾಗಿ ಯುವಕರ ಪಡೆಯನ್ನ ಕಟ್ಟುತ್ತಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಎಚ್.ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಳೆಯಿಂದ ಟಿಕೆಟ್ ನೀಡಲು ಅರ್ಜಿ ಸ್ವೀಕಾರ ಪ್ರಾರಂಭವಾಗಲಿದ್ದು, 17ಕ್ಕೆ ಟಿಕೆಟ್ ನೀಡಲಾಗುವುದು. ಬಲಿಷ್ಠವಾಗಿ ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ ನಾನು ಅದನ್ನು ಅಚ್ಚಕಟ್ಟಾಗಿ ಮಾಡುತ್ತನೆ  ಎಂದು ತಿಳಿಸಿದ್ದಾರು..

 

ಮುಂದಿನ ಲೋಕ ಸಭಾ ಚುನಾವಣೆಗೆ ನಾವು ಕೂಡ ಸಜ್ಜಾಗುತ್ತಿದ್ದೇವೆ. ಮುಂದಿನಲೋಕಸಭಾ ಚುನಾವಣೆ ಭಾರತದ ಇತಿಹಾಸದಲ್ಲಿ ಒಂದು ತಿರುವನ್ನು ಪಡೆಯಲಿದೆ. ಪ್ರಾಂತೀಯ ಪಕ್ಷಗಳು ಅಧಿಕಾರ ಹಿಡಿಯಲಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಂತೀಯ ನಾಯಕತ್ವ ಬರಲಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com