ನನಸಾದ ಕನಸು : ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡ ನ್ಯಾಯಾಲಯ ಸಂಕೀರ್ಣ…!

ಹುಬ್ಬಳ್ಳಿ :  ಹುಬ್ಬಳ್ಳಿ ನಗರದಲ್ಲಿ  ನ್ಯಾಯಾಲಯದ ಸಂಕೀರ್ಣದ ಉದ್ಘಾಟನೆ ಸಮಾರಂಭ ನಡೆದಿದ್ದು, ನೂತನ  ಕೋರ್ಟ್​ ಅನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಉದ್ಘಾಟಿಸಿದ್ದರು. ಇನ್ನ ಉದ್ಘಾಟನಾ  ಸಮಾರಂಭದಲ್ಲಿ ದೀಪಕ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್, ಮೋಹನ್ ಶಾಂತನಗೌಡ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಾಥ್ ನೀಡಿದ್ದಾರೆ. 

ಸಮಾರಂಭದಲ್ಲಿ ಮಾತನಾಡಿದ ಸಿಎಂ ಕುಮಾಸ್ವಾಮಿ,  ಏರ್‌ಶೋ ವನ್ನ ಬೆಂಗಳೂರಿಂದ ಉತ್ತರ ಪ್ರದೇಶದ ಲಖನೌ ಗೆ ಸ್ಥಳಾಂತರ ಮಾಡಿದ್ದು ಸರಿಯಲ್ಲ. ಲೋಕಸಭಾ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು‌ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.  ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳಿವೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರು ಏರಶೋ ನಡೆಸಲು ಅತ್ಯಂತ ಸುಸಜ್ಜಿತ ನಗರವಾಗಿತ್ತು. ಆದ್ರೆ, ಇದನ್ನ ಕಡೆಗಣೆಸಿದ್ದು ನನಗೆ ಈಗ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಆದ ಮೇಲೆ ನಾನು ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೆನೆ. ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸ್ಥಳೀಯ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ನಾನು ಇಲ್ಲಿ ಇರುವುದು ಆಗುವುದಿಲ್ಲ. ಇಲ್ಲವಾದಲ್ಲಿ ನಾನು ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಪ್ರವಾಸ ಇಟ್ಟುಕೊಂಡಿದ್ದೆ. ಎಂದು ತಿಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com