ರಾಜ್ಯಕ್ಕೆ ಅನ್ನ ನೀಡಿದ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಜನರಿದ್ದಾರೆ : ಎಚ್. ಆಂಜನೇಯ

‘ ರಾಜ್ಯಕ್ಕೆ ಅನ್ನ ನೀಡಿದ ವ್ಯಕ್ತಿಯನ್ನೇ ಸೋಲಿಸಿದ ಜನರಿದ್ದಾರೆ.. ಅನ್ನ ನೀಡಿದವರಿಗೆ ದ್ರೋಹ ಮಾಡಿದ ಜಾತಿ ಇದೆ ‘ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಹೇಳಿಕೆ ನೀಡಿದರು. ನಗರದ ಎಸ್ ಎಸ್ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಂಡಿದ್ದ ನೂತನ ಸಚಿವರಿಗೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆಯ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾಡಿದ ಅಭಿವೃದ್ಧಿ ಕೆಲಸ ಇಡೀ ರಾಜ್ಯದಲ್ಲಿ ಯಾರು ಸಹ ಮಾಡಿಲ್ಲ.. ಅಂತವರನ್ನೇ ಸೋಲಿಸಿದ್ದಾರೆ.. ಅದರಲ್ಲೂ ಸಿದ್ದರಾಮಯ್ಯ ನವರು ರಾಜ್ಯಕ್ಕೆ ಅನ್ನ ಕೊಟ್ಟಿದಂತವರು. ಆದ್ರೆ ಈ ಜನ ಅನ್ನ ಹಾಕಿದವರನ್ನು ಸೋಲಿಸಿದ್ದಲ್ಲದೆ, ಅನ್ನ ಹಾಕಿದವರಿಗೆ ದ್ರೋಹ ಮಾಡಿದಂತ ಜಾತಿ ಇದೆ ‘ ಎಂದು ಹೇಳಿಕೆ ನೀಡಿದರು.

‘ ಮತ್ತೊಮ್ಮೆ ಸಿದ್ದರಾಮಯ್ಯ ನವರನ್ನು ಆಗ್ತಾರೆ ಎನ್ನುವ ನಿರೀಕ್ಷೆ ಇದೆ.. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಹುಮತ ಸಿಕ್ಕಿಲ್ಲ.. ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಾಯಿತು ‘ ಎಂದರು.

4 thoughts on “ರಾಜ್ಯಕ್ಕೆ ಅನ್ನ ನೀಡಿದ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಜನರಿದ್ದಾರೆ : ಎಚ್. ಆಂಜನೇಯ

Leave a Reply

Your email address will not be published.

Social Media Auto Publish Powered By : XYZScripts.com