ಏರ್ ಶೋ ಲಖನೌಗೆ ಸ್ಥಳಾಂತರ ಮಾಡಿದ್ದು ಸರಿಯಾದ ನಿರ್ಧಾರವಲ್ಲ : ಡಿ ಕೆ ಶಿವಕುಮಾರ್​

ಬೆಂಗಳೂರು : ಏರ್ ಶೋ ಲಖನೌಗೆ ಸ್ಥಳಾಂತರ ಮಾಡಿದ್ದು ಸರಿಯಾದ ನಿರ್ಧಾರವಲ್ಲ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಲಾ ಸೀತಾರಾಮನ ಅವರನ್ನು ಭೇಟಿ ಮಾಡಿ ಸ್ಥಳಾಂತರ ಮಾಡದಂತೆ ಮನವಿ ಮಾಡಿದ್ದಾರೆ ಎಂದು  ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್ ಶೆಟ್ಟರ್ ರಾಜ್ಯಕ್ಕೆ ಮಾಡಿದ ಅನ್ಯಾಯದ ಬಗ್ಗೆ ಪ್ರಶ್ನಿಸಲಿ. ಕೇಂದ್ರಕ್ಕೆ ನಿಯೋಗ ಕೊಂಡೋಯ್ದು ಏರಶೋ ಬೆಂಗಳೂರಿಗೆ ತರಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನೀರಾವರಿ ಯೋಜನೆಗಳ‌ ಕುರಿತು ಚರ್ಚಿಸಲು ಇದೆ 20 ರಂದು ಕೇಂದ್ರ ಸಚಿವರ ಭೇಟಿ ಇದೆ. ಕೇಂದ್ರ ನೀರಾವರಿ ಸಚಿವ ಗಡ್ಕರಿ ಭೇಟಿ ಮಾಡಿ ನೀರಿನ ಸದ್ಬಳಕೆಗೆ ಪ್ರಯತ್ನ ‌ಮಾಡುತ್ತೆವೆ. ಮಹದಾಯಿ ನದಿ‌ನೀರು ಹಂಚಿಕೆ ವಿವಾದ. ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಬರಲಿದೆ. ನೀರಾವರಿ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ. ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ಅಶಾಭಾವ ಹೊಂದಿದೆ. ಅಲಮಟ್ಟಿ ಎತ್ತರಿಸುವ ವಿಚಾರದಲ್ಲಿ ವಿಳಂಬವಾಗುತ್ತಿದೆ. ಅದಕ್ಕೆ ಅಲ್ಲಿನ ರೈತರ ಭೂಮಿಯನ್ನ ಸ್ವಾಧೀನ ಮಾಡಕೊಂಡು ಆಲಮಟ್ಟಿ ಜಲಾಶಯವನ್ನ ಎತ್ತರಿಸುತ್ತೆವೆಂದ್ರು…

Leave a Reply

Your email address will not be published.

Social Media Auto Publish Powered By : XYZScripts.com