ಚಿಕ್ಕಮಗಳೂರು : ನಕಲಿ ಸಾಗುವಳಿ ಚೀಟಿ ನೀಡುತ್ತಿದ್ದ ವ್ಯಕ್ತಿಯ ಬಂಧನ..

ಚಿಕ್ಕಮಗಳೂರು : ನಕಲಿ ಸಾಗುವಳಿ ಚೀಟಿ ನೀಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿ ಕೊಪ್ಪ ಪಟ್ಟಣದ ಕೆ.ಅಹ್ಮದ್ ತಹಶೀಲ್ದಾರರ ನಕಲಿ ಸೀಲು ಹಾಗೂ ಸಹಿ ಹಾಕಿ ವಂಚಿಸುತ್ತಿದ್ದ.

20 ಸಾವಿರ ಹಣ ಪಡೆದು ಅರುಂಧತಿ ಅವರಿಗೆ ಸಾಗುವಳಿ ಚೀಟಿ ನೀಡಿದ್ದ. ನಕಲಿ ಸಾಗುವಳಿ ಚೀಟಿ ನೀಡಿದ್ದು ಮಾತ್ರವಲ್ಲ ಶಾಸಕ ಟಿ.ಡಿ.ರಾಜೇಗೌಡರ ಹೆಸರು ಬಳಕೆ ಆರೋಪ ಕೇಳಿ ಬಂದಿದೆ.

ಅನುಮಾನಗೊಂಡು ತಾಲೂಕು ಕಚೇರಿಗೆ ದೂರು ನೀಡಿದ ಅರುಂಧತಿ ಸಾಗುವಳಿ ಚೀಟಿಯಲ್ಲಿದ್ದ ಸಹಿ ನನ್ನದು ಅಲ್ಲ ಎಂದು ತಹಶೀಲ್ದಾರ್ ಹೇಳಿದ್ದಾರೆ. ಅರುಧಂತಿಗೆ ಕೊಟ್ಟ ಸಾಗುವಳಿ ಚೀಟಿ ಕೊಪ್ಪ ಪ ಪಂ ಸರ್ವೆ ನಂ.130 ನಕಲಿಯಾಗಿದ್ದು, ಸರ್ಕಾರಿ ದಾಖಲೆಯಲ್ಲಿ ಹರಂದೂರು ಸರ್ವೆ ನಂ 65 ಎಂದು ನಮೂದಿಸಲಾಗಿದೆ.

ಕೊಪ್ಪ ಪೊಲೀಸರು ಕೆ.ಅಹ್ಮದ್ ನನ್ನು ಬಂಧಿಸಿದ್ದು, ಸಾಗುವಳಿ ಪತ್ರ, ಬ್ಯಾಂಕ್ ಚಲನ್ ಎಲ್ಲಾ ನಕಲಿ ಎಂದು ಸಾಬೀತು ಪಡಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com