ಗದ್ದೆಯಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡೋದು ಬರೀ ಗಿಮ್ಮಿಕ್ : ಕೆ.ಎಸ್.ಈಶ್ವರಪ್ಪ

ಮೈಸೂರು : ರೈತರ ಗದ್ದೆಯಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡೋದು ಗಿಮ್ಮಿಕ್ ಮಾಡುತ್ತಿದ್ದಾರೆ. ನಾಟಿ ಮಾಡಿ ಕುಮಾರಸ್ವಾಮಿ ಮಾಡೆಲ್ ನಾಟಕವಾಡುತ್ತಿದ್ದಾರೆ. ಎಂದು ಮೈಸೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

 

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ರೈತರ ಗದ್ದೆಯಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡೋದು ಗಿಮ್ಮಿಕ್ ಮಾಡುತ್ತಿದ್ದಾರೆ, ಮೊದಲು ಬಗರ ಹುಕುಂ ರೈತರಿಗೆ ಭೂಮಿ ಕೊಡಿ, ಈಶ್ವರಪ್ಪ ಪೆದ್ದ, ಸಂವಿಧಾನ ಗೊತ್ತಿಲ್ಲ ಅಂತಾರೆ, ನಿಮಗೆ ಕಾನುನು ಗೊತ್ತಾ, ನಾನು ಏ ಸಿದ್ದರಾಮಯ್ಯ ಅಂತಾ ಏಕವಚನದಲ್ಲಿ ಮಾತನಾಡಬಹುದು. ಆದ್ರೆ ನಮ್ಮ ಪಕ್ಷದ ಸಂಸ್ಕೃತಿ ಅಲ್ಲ ಎಂದು ತಿಳಿಸಿದ್ದರು.

ನೀತಿ ಸಂಹಿತೆ ವೇಳೆ ಸಮಾಜಕಲ್ಯಾಣ,ಪೊಲೀಸ್, ಕಂದಾಯ ಇಲಾಖೆಗಳಲ್ಲಿ ವರ್ಗಾವಣೆಯಾಗುತ್ತಿದೆ.  ಇದೇನಾ ಸಿದ್ದರಾಮಯ್ಯಾವ್ರೆ ಸಂವಿಧಾನ ಎಂದು ಸಿದ್ದರಾಮಯ್ಯ ವಿರುದ್ಧ ಮತ್ತು ಮೈತ್ರಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

eshwarappa and hdkumarswamy ಗೆ ಚಿತ್ರದ ಫಲಿತಾಂಶ

ಇನ್ಮು ಮುಖ್ಯಮಂತ್ರಿ ಪದಗ್ರಹ ಸಂದರ್ಭದಲ್ಲಿ ಗಣ್ಯರ ಹೋಟೆಲ್ ಬಿಲ್ ದುಬಾರಿ ಬಗ್ಗೆ ಮಾತನಾಡಿದ  ಈಶ್ವರಪ್ಪ, ಅಥಿತಿಗಳ ಸತ್ಕಾರದ ಹೆಸರಿನಲ್ಲಿ ತೆರಿಗೆ ಹಣ ಲೂಟಿ,  ಮುಖ್ಯಮಂತ್ರಿಗಳು ಪ್ರಕರಣವನ್ನು ತನಿಖೆ ನಡೆಸಬೇಕು. ಈ ಸರ್ಕಾರದಲ್ಲಿ ಎಲ್ಲಾ ರೀತಿಯಲ್ಲೂ ಲೂಟಿ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  ಇನ್ನ ಸುದ್ದಿಗೋಷ್ಟಿಯಲ್ಲಿ ಶಾಸಕ ಸಿ.ಟಿ.ರವಿ ಸೇರಿ ಹಲವರು ಭಾಗಿಯಾಗಿದ್ದರು

 

Leave a Reply

Your email address will not be published.

Social Media Auto Publish Powered By : XYZScripts.com