ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ : ಫೇಸ್ಬುಕ್ ಲೈವ್ ನಲ್ಲಿ ಮದುವೆಯಾದ ಯುವಜೋಡಿ..!

ಪ್ರೇಮ ವಿವಾಹಕ್ಕೆ ಪೋಷಕರು ವಿರೋಧಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಫೇಸ್ಬುಕ್ ಲೈವ್ ಮೂಲಕ ಮದುವೆಯಾದ ಅಪರೂಪದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಪ್ರೇಮಿಗಳಾದ ಕಿರಣ್ ಮತ್ತು ಅಂಜನಾ ಪೇಸ್ಬುಕ್ ಲೈವಲ್ಲಿ ಮದುವೆಯಾಗಿದ್ದಾರೆ.

ಈ ಯುವ ಜೋಡಿಗಳು ಕಳೆದ ಮೂರ್ನಾಲ್ಕು ವರ್ಷದಿಂದ ಪ್ರೀತಿಸ್ತಾ ಇದ್ರು. ಆದ್ರೆ ಇವರಿಬ್ಬರ ಮದುವೆಗೆ ಯುವತಿ ತಂದೆ ಜೆಡಿಎಸ್ ಮುಖಂಡರೂ ಆದ ತಿಮ್ಮರಾಜು ವಿರೋಧ ವ್ಯಕ್ತಪಡಿಸಿದ್ರು. ಹಾಗಾಗಿ ಈ ಜೋಡಿಹಕ್ಕಿಗಳು ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

ಈ ನಡುವೆ ಯುವತಿ ತಂದೆ ತಿಮ್ಮರಾಜು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಮಧುಗಿರಿ ಪೊಲೀಸರಿಗೆ ದೂರು‌ ನೀಡಿದ್ರು. “ನಾನು ಕಾಣೆಯಾಗಿಲ್ಲ , ಪ್ರೀತಿಸಿದ ಯುವಕನ ಜೊತೆ ಮದುವೆಯಾಗಿದ್ದೀನಿ” ಎಂದು ಫೇಸ್ಬುಕ್ ಲೈವಲ್ಲೇ ಯುವತಿ ಸಂದೇಶ ರವಾನಿಸಿದ್ದಾಳೆ.

Leave a Reply

Your email address will not be published.