ವರ್ಗಾವಣೆ ದಂಧೆ ಬಗ್ಗೆ ದಾಖಲೆ ಇದ್ದರೆ ಕೊಡಿ, ಸುಖಾಸುಮ್ಮನೆ ಆರೋಪ ಮಾಡಬೇಡಿ : HDK

‘ ಬಿಜೆಪಿಯವರು 5 ವರ್ಷ ಅಧಿಕಾರದಲ್ಲಿದ್ದಾಗ ವರ್ಗಾವಣೆ ಮಾಡಲಿಲ್ವಾ.? ವರ್ಗಾವಣೆ ಮಾಡುವಾಗ ಅವರು ದಂಧೆ ಮಾಡಿದ್ರಾ.? ‘ ಮೈಸೂರಿನಲ್ಲಿ ಬಿಜೆಪಿಯನ್ನು ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಪ್ರಶ್ನೆ ಮಾಡಿದ್ದಾರೆ. ‘ ವರ್ಗಾವಣೆ ಅಡಳಿತದ ಒಂದು ಭಾಗ. ಅದರಲ್ಲಿ ದಂಧೆ ಎಲ್ಲಿಂದ ಬಂತು. ದಂಧೆ ಬಗ್ಗೆ ಒಂದು‌ ದಾಖಲೆ‌ ಇದ್ದರೆ ಕೊಡಿ. ಸುಖಾ ಸುಮ್ಮನೆ‌ ಆರೋಪ ಮಾಡಬೇಡಿ ‘ ಎಂದಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು ‘ ಕಾಂಗ್ರೆಸ್ ಮತ್ತು ನಮ್ಮ ನಡುವೆ ಫ್ರೆಂಡ್ಲಿ ಫೈಟ್ ನಡೆಯಲಿದೆ. ಈ ಬಗ್ಗೆ ಸ್ಥಳೀಯ ಮಟ್ಟದ ನಾಯಕರೇ ಮಾತನಾಡಿದ್ದಾರೆ. ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ‌ ಇಲ್ಲ ‘ ಎಂದು ಸಿಎಂ ಹೆಚ್.ಡಿ.ಕೆ ಸ್ಪಷ್ಟಪಡಿಸಿದ್ದಾರೆ.

‘ ನೆರೆ ಮತ್ತು ಬರ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಪರಿಹಾರ ಪ್ರಕ್ರಿಯೆಗೆ ಅಡ್ಡಿ ಯಾಗಿದೆ.
ನೆರೆ ಪೀಡಿತ ಮತ್ತು ಬರ ಪೀಡಿತ ಸಂತ್ರಸ್ತರಿಗೆ‌ ನೆರವು ನೀಡಲು ಸೂಚನೆ ನೀಡಿದ್ದೇನೆ. ಪ್ರತಿ ಜಿಲ್ಲಾಧಿಕಾರಿ ಖಾತೆಗೆ 5 ಕೋಟಿ‌ ನೀಡಲಾಗಿದೆ ‘ ಎಂದು
ಮೈಸೂರಿನಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com