Cricket : ಸ್ವಿಂಗ್ ಬಲೆಗೆ ಬಿದ್ದ ಭಾರತ 107ಕ್ಕೆ ಆಲೌಟ್ : 5 ವಿಕೆಟ್ ಪಡೆದ ಆ್ಯಂಡರ್ಸನ್

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 107ಕ್ಕೆ ಆಲೌಟ್ ಆಗಿದೆ. ಭಾರತದ ಪರವಾಗಿ ಆರ್. ಅಶ್ವಿನ್ 29 ಹಾಗೂ ನಾಯಕ ವಿರಾಟ್ ಕೊಹ್ಲಿ 23 ರನ್ ಗಳಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟ್ಸಮನ್ ಗಳು ಸ್ವಿಂಗ್ ದಾಳಿಗೆ ನಿರುತ್ತರರಾದಂತೆ ಕಂಡುಬಂದರು.

ಅದ್ಭುತ ಸ್ವಿಂಗ್ ಬೌಲಿಂಗ್ ಪ್ರದರ್ಶನ ತೋರಿದ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ 5 ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ 2, ಸ್ಟುವರ್ಟ್ ಬ್ರಾಡ್1 ಹಾಗೂ ಸ್ಯಾಮ್ ಕರನ್ 1 ವಿಕೆಟ್ ಪಡೆದರು. ಎರಡನೇ ದಿನವೂ ಮಳೆ ಅಡ್ಡಿಪಡಿಸಿದ್ದರಿಂದ 35.2 ಓವರುಗಳ ಆಟ ಮಾತ್ರ ಸಾಧ್ಯವಾಯಿತು.

Leave a Reply

Your email address will not be published.

Social Media Auto Publish Powered By : XYZScripts.com