ಶ್ರೀರಾಮುಲುರನ್ನು ಎರಡು ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು : ಬಿಎಸ್ ಯಡಿಯೂರಪ್ಪ

ಬಳ್ಳಾರಿ : ಶಾಸಕ ಶ್ರೀರಾಮುಲು ಅವರನ್ನು ನಾವೂ ಎರಡೂ ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು, ಬಾದಾಮಿಯಿಂದ ಮಾತ್ರ ಶ್ರೀರಾಮುಲುರನ್ನು ಸ್ಪರ್ಧೆ ಮಾಡಿಸಬೇಕಿತ್ತು. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ  ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ  ಸುದ್ದಿಗೋಷ್ಟಿ ಮಾತನಾಡಿದ ಬಿಎಸ್​ವೈ, ನಾನು ಯಾರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಆಗಿಲ್ಲ. ನನ್ನೊಂದಿಗೆ ಕಾಂಗ್ರೆಸ್ ಶಾಸಕರು ಯಾರು ಸಂಪರ್ಕದಲ್ಲಿಲ್ಲ. ಶಾಸಕ ಶ್ರೀರಾಮುಲು ಅವರನ್ನು ಮುಂದೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಯಾರೇ ಆಗಲಿ ಅಕ್ರಮಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಕರ್ನಾಟಕ ಏಕೀಕರಣ ಆದ ಪ್ರತ್ಯೇಕ ರಾಜ್ಯದ ಮಾತು ಆಡಬಾರದು. ಅಖಂಡ ಕರ್ನಾಟಕವೇ ನಮ್ಮ ಧ್ಯೇಯವಾಗಿದೆ. ಏಕೀಕರಣಕ್ಕೆ ಧಕ್ಕೆ ಬರುವ ಮಾತು ಯಾರೂ ಆಡಬಾರದು. ಯಾರೂ ಪ್ರತ್ಯೇಕ ರಾಜ್ಯ ಬಯಸುತ್ತಿಲ್ಲ ಎಂದು ತಿಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com