ನಾನು ಬಾದಾಮಿಯಲ್ಲಿ ಅರ್ಧ ಗಂಟೆ ಪ್ರಚಾರ ಮಾಡಿದ್ದರೆ ಸಿದ್ದರಾಮಯ್ಯ ಮನೇಲಿ ಕೂರ್ತಿದ್ರು : BSY

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾನು ಕೇವಲ ಅರ್ಧ ಗಂಟೆ ಬಾದಾಮಿಯಲ್ಲಿ ಪ್ರಚಾರ ಮಾಡಿದ್ರೆ ಸಾಕಿತ್ತು, ಸಿದ್ರಾಮಯ್ಯ ಮನೆಲ್ಲಿ ಕೂರ್ತಿದ್ರು. ವಿಧಾನ ಸೌಧದ ಮೆಟ್ಟಿಲು ಹತ್ತುತಿರಲಿಲ್ಲ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಡಿರುವ ಅವರು, ಇಂದು ರಾಯಚೂರಿನಲ್ಲಿ ಸುದ್ದಿಗೊಷ್ಠಿ ನಡೆಸಿ, ಬಾದಮಿಯಲ್ಲಿ ಸಿದ್ದರಾಮಯ್ಯ ನವರು ಬಿಜೆಪಿಯವರು ಜಾತಿ ಹೊಡೆಯುವ ಕೆಲಸ ಮಾಡ್ತಿದ್ದಾರೆ ಎಂದಿದ್ದಾರಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಬಾದಮಿಯಲ್ಲಿ ಅರ್ಧ ಗಂಟೆ ಪ್ರಚಾರ ಮಾಡಿದ್ದರೆ ಸಿದ್ರಾಮಯ್ಯ ಮನೆಯಲ್ಲಿ ಕೂರುತ್ತಿದ್ದರು.

‘ ವಿಧಾನ ಸಭೆ ಮೆಟ್ಟಿಲು ಅತ್ತುತ್ತಿರಲಿಲ್ಲ.‌‌ ಈಗ ಅವರಿಗೆ ಬಾದಮಿ ಕ್ಷೇತ್ರಕ್ಕೆ ಬೇಕಾದ ಸವಲತ್ತುಗಳನ್ನೇ ಕೊಡಿಸಲು ಹೆಣಗಾಡುತ್ತಿದ್ದಾರೆ ‘ ಎಂದು ಹೇಳಿದ್ದಾರೆ.‌ ಇನ್ನು ರಾಜ್ಯಾದ್ಯಂತ ಬರಗಾಲವಿದ್ರೂ ಸರ್ಕಾರ ಸ್ಪದಿಸಿಲ್ಲ, ಜನರು ಗುಳೆ ಹೋಗುತ್ತಿದ್ದಾರೆ, ಸರ್ಕಾರ ಬದುಕಿದಿಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ ಅಂದ್ರು. ಇನ್ನು
ಎಂಬಿ ಪಾಟೀಲ್ ಜೊತೆ ಒಂದೇ‌ ವಿಮಾದಲ್ಲಿ ಹೋಗಿದ್ದು ನಿಜ. ಆದ್ರೆ ಅವರ ಬಳಿ ಇಲ್ಲಿಯವರೆಗೂ ಒಂದು ಅಕ್ಷರವನ್ನೂ ರಾಜಕೀಯವಾಗಿ ಮಾತನಾಡಿಲ್ಲ. ನಾನು ಹೊದ ವಿಮಾನದಲ್ಲಿ ಆಕಸ್ಮಿಕವಾಗಿ ಎಂಬಿ ಪಾಟೀಲ್ ಬಂದಿದ್ದರು. ಕಾಂಗ್ರೆಸ್ ನಾಯಕರಿಗೆ ಅವರ ಸಚಿವ ಹಾಗೂ ಶಾಸಕರ ಮೇಲೆ ನಂಬಿಕೆ ಇಲ್ಲ‌ ‘ ಎಂದರು.

One thought on “ನಾನು ಬಾದಾಮಿಯಲ್ಲಿ ಅರ್ಧ ಗಂಟೆ ಪ್ರಚಾರ ಮಾಡಿದ್ದರೆ ಸಿದ್ದರಾಮಯ್ಯ ಮನೇಲಿ ಕೂರ್ತಿದ್ರು : BSY

Leave a Reply

Your email address will not be published.

Social Media Auto Publish Powered By : XYZScripts.com