ಪ್ರಧಾನಿ ಮೋದಿಗೆ ದೇಶದ ರೈತರ ಹಿತ ಬೇಡವಾಗಿದೆ : ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್

ಮಂಗಳೂರಿನಲ್ಲಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ‘ ಕಾಂಗ್ರೆಸ್ ಸೋಲಿಗೆ ಹಿಂದೂಗಳನ್ನು ಕಡೆಗಣಿಸಿದ್ದು ಕಾರಣ ಎಂಬ ಜೆ.ಡಿ.ಎಸ್ ಮುಖಂಡ ಭೋಜೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ‘ ಭೋಜೇಗೌಡರ ಅಭಿಪ್ರಾಯವನ್ನು ನಾವ್ಯಾಕೆ ಒಪ್ಪಬೇಕು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ನಮ್ಮ ಪಕ್ಷಕ್ಕೆ ಯಾಕೆ ಸೊಲಾಯಿತು ಎಂದು ವಿಶ್ಲೇಷಣೆ ಮಾಡ್ತೀವಿ ‘ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು ‘ ಜೆ.ಡಿಎಸ್ ಜೊತೆ ಯಾವುದೇ ಅಧಿಕೃತ ಮೈತ್ರಿ ಇಲ್ಲ. ಸ್ಥಳೀಯವಾಗಿ ಒಬ್ಬರಿಗೊಬ್ಬರು ಸಹಕಾರ ಕೊಟ್ರೆ ಕೊಡಬಹುದು ‘ ಎಂದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿ ‘ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ ‘ ಎಂದರು.

ರೈತ ಆತ್ಮಹತ್ಯೆ ಆಗಿ ಕುಟುಂಬ ನಾಶ ವಿಚಾರದ ಕುರಿತು ಮಾತನಾಡಿ ‘ ಅದಕ್ಕೆ ನಾವು ಸ್ಪಂದಿಸಬೇಕು. 17-18 ರಲ್ಲಿ 12 ಸಾವಿರ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಏನು ಸಂದೇಶ ಹೋಗುತ್ತೆ ಆದ್ರಿಂದ. ಅದಕ್ಕಾಗಿ ಸಾಲ ಮನ್ನವನ್ನು ಮಾಡಿದ್ವಿ. ಕೇಂದ್ರ ಸರ್ಕಾರ ಸಾಲಮನ್ನಾಗೆ ಅನುದಾನ ಕೊಟ್ಟಿದ್ದರೆ ನಾವು ರೈತರಿಗೆ, ನೀರಾವರಿ ಸೇರಿದಂತೆ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಕೊಡಬಹುದಿತ್ತು. ಆದ್ರೆ ಪ್ರಧಾನಿ ಮೋದಿಗೆ ರೈತರ ಹಿತ ಬೇಡವಾಗಿದೆ ‘ ಎಂದರು.

‘ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಯಾವುದೇ ಕಾರ್ಯಕ್ರಮಗಳು ನಿಲ್ಲಿಸುವುದಿಲ್ಲ. ಉತ್ತರ ಆಡಳಿತ ನೀಡುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಬಿಜೆಪಿ ಅವಧಿಯ ಭ್ರಷ್ಟಾಚಾರ ಆಡಳಿತ ಮತ್ತೆ ಪುನರಾವರ್ತನೆ ಆಗಬಾರದು. ಈ ನಿಟ್ಟಿನಲ್ಲಿ ನಮ್ಮ ವರಿಷ್ಠರು ಸಮ್ಮಿಶ್ರ ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com