ವರುಣನ ಆರ್ಭಟಕ್ಕೆ ನಲುಗಿಹೋದ ದೇವರನಾಡು : 30ಕ್ಕೂ ಹೆಚ್ಚು ಮಂದಿ ಸಾವು…!

ಕೇರಳ : ಬಹಳ ವರ್ಷಗಳ ನಂತರ ಕೇರಳದಲ್ಲಿ  ಭಾರೀ ಮಳೆಯಾಗಿದ್ದು, ಕೇರಳದ ಕಣ್ಣೂರು ಸೇರಿದಂತೆ ಅನೇಕ ಭಾಗಗಳಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಣ್ಣೂರಿನಲ್ಲಿ ಭೂಕೂಸಿತದಿಂದ ಮನೆಗಳೆರಡು ಧರೆಗುರುಳಿದಿದೆ.

Image result for kerala rain

ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕರಾವಳಿಕ ತತ್ತರಿಸಿದ್ದು, ಮುಖ್ಯಮಂತ್ರಿ ಪಿನರಾಯ್‌ ವಿಜಯನ್‌ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪ್ರವಾಹಕ್ಕೆ ಈ ವರೆಗೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್‌ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Related image

ಭಾರೀ ಮಳೆಗೆ ದೇವರನಾಡು ಕೇರಳ ಅಕ್ಷರಶಃ ನಲುಗಿ ಹೋಗಿದೆ. ವರುಣನ ಆರ್ಭಟಕ್ಕೆ ಸುಮಾರು 30 ಮಂದಿ ಅಸುನೀಗಿದ್ದಾರೆ. ರಾಜ್ಯದ ಉತ್ತರ ಭಾಗದಲ್ಲಿ ಹಲವಾರು ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆಯಾಗುತ್ತಿದ್ದು, ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನಾ ಪಡೆ, ವಾಯು ಪಡೆಗಳು ಕೇರಳ ಸರ್ಕಾರದೊಂದಿಗೆ ಹರ ಸಾಹಸ ಪಡುತ್ತಿವೆ.  26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿರುವ ಬೆನ್ನಲ್ಲೇ ಡ್ಯಾಂನ ಗೇಟ್​ಗಳನ್ನ ತೆರೆಯಲಾಗಿದೆ. ಕೇರಳದ ಉತ್ತರ ಭಾಗದಲ್ಲಿ ಸುಮಾರು 26 ಡ್ಯಾಂಗಳು ಉಕ್ಕಿ ಹರಿಯುತ್ತಿವೆ.

Related image

ಕೊಯಿಕ್ಕೋಡ್, ವಯನಾಡು, ಪಾಲಕ್ಕಾಡ್, ಇಡುಕ್ಕಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಭೂ ಕುಸಿತ ಹಾಗೂ ಪ್ರವಾಹ ಉಂಟಾಗಿರುವ ಬೆನ್ನಲ್ಲೇ ಈ ಪ್ರದೇಶಗಳಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರದ ಮೊರೆಹೋಗಿದ್ದಾರೆ. ಕೇಂದ್ರವೂ ತಕ್ಷಣ ಸೂಕ್ತವಾಗಿ ಸ್ಪಂದಿಸಿದೆ ಎಂದು ತಿಳಿದುಬಂದಿದೆ.

Image result for kerala rain

ಇತ್ತ ಪ್ರವಾಹದಲ್ಲಿ 30 ಜನರು ಸಾವನ್ನಪ್ಪಿರುವ ಕುರಿತು ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಅಲ್ಲಿನ ಜನರಿಗೆ ರಾಜ್ಯದಿಂದ ನೆರವು ನೀಡಿದ್ದಾರೆ. ಕೇರಳಕ್ಕೆ 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್​ಗೆ ನಿರ್ದೇಶನ ನೀಡಿದ್ದಾರೆ.
ಪ್ರವಾಹಕ್ಕೆ ಸಿಲುಕಿ ಪ್ರಾಣಿಗಳೂ ಕೂಡ ಪರದಾಡ್ತಿವೆ. ಸುಮಾರು 40ಕ್ಕೂ ಅಧಿಕ ಜಿಂಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಆ ಜಿಂಕೆಗಳು ಪ್ರವಾಹದ ಸುಳಿಯಿಂದ ಹೊರಬರಲಾರದೇ ಪರದಾಡುತ್ತಿದೆ.

 

 

Leave a Reply

Your email address will not be published.