ರೈಲು ನಿಲ್ದಾಣದಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿದ ಯುವಕರಿಗೆ ಪೊಲೀಸರು ಕೊಟ್ಟ ಶಿಕ್ಷೆ ಏನು …?

ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ಯುವಕರು ಮಾರುಹೋಗಿದ್ದಾರೆ, ಪೊಲೀಸರು ಎಷ್ಟೇ ಕ್ರಮ ಕೈಗೊಂಡರು  ಯುವಕರು ಎಚ್ಚೆತ್ತುಕೊಳ್ಳದೇ ಇನ್ನು ಹೆಚ್ಚಾಗಿ ಮಾಡುತ್ತಿದ್ದಾರೆ.  ಕಿಕಿ ವಿಡಿಯೋ ಆಧರಿಸಿ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಮೂವರು ಯುವಕರು ರೈಲಿನಿಂದ ಕಿಕಿ ಚಾಲೆಂಚ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.  ಪೊಲೀಸರು ಯುವಕರನ್ನು  ರೈಲು ಶುಚಿಗೊಳಿಸುವ ಶಿಕ್ಷೆ ನೀಡುದ್ದಾರೆ.

ಕಿಕಿ ಚಾಲೆಂಜ್ ಮಾಡಿದ ಯುವಕರನ್ನು ಬಂಧಿಸಿದ ಪೊಲೀಸರೇ ರೈಲು ನಿಲ್ದಾಣ ಶುಚಿಗೊಳಿಸುವ ಶಿಕ್ಷೆ ನೀಡಿದ್ದಾರೆ. ಇದ್ದರಿಂದ ಪೊಲೀಸರು ಇಂತಹ ವಿಡಿಯೋ ಆಧರಿಸಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

ಮೂವರು ಯುವಕರು ಚಾಲೆಂಜ್ ಸ್ವೀಕರಿಸಿ ಮಾಡಿದ್ದ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇದುವರೆಗೂ 2.2 ಲಕ್ಷ ವ್ಯೂಮಜ್  ಆಗಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ಯುವಕ ಹಾಡಿಗೆ ಡ್ಯಾನ್ಸ್ ಮಾಡಿದರೆ ಮತ್ತೊಬ್ಬ ಯುವಕ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಾನೆ. ಮತ್ತೊಬ್ಬ ಯುವಕ ರೈಲಿನ ಬಾಗಿಲಿನಲ್ಲಿ ನಿಂತು ಡಾನ್ಸ್ ಮಾಡಿದ್ದಾನೆ.

ಈ ವಿಡಿಯೋ ಅನ್ವಯ ಮೂವರು ಯುವಕರನ್ನು ರೈಲ್ವೇ ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 145 ಬಿ, 147 ಅಹಾಗೂ 156  ಸೇರಿದಂತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತು ಮೂವರು ಬೆಳಗ್ಗೆ 11 ರಿಂದ 2 ಮಧ್ಯಾಹ್ನ ಹಾಗೂ 3 ರಿಂದ ಸಂಜೆ 4 ಗಂಟೆ ವರೆಗೂ ರೈಲು ನಿಲ್ದಾಣ ಶುಚಿಗೊಳಿಸಿ, ಪ್ರಯಾಣಿಕರಿಗೆ ಕಿಕಿ ಚಾಲೆಂಜ್ ನಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದೆ.

 

Leave a Reply

Your email address will not be published.