KSOUಗೆ ಕೊನೆಗೂ ಸಿಕ್ತು ಯುಜಿಸಿ ಮಾನ್ಯತೆ : ಮುಕ್ತ ವಿವಿಯ ಲಕ್ಷಾಂತರ ವಿದ್ಯಾರ್ಥಿಗಳು ನಿರಾಳ

ಸದಾ ವಿವಾದಗಳು, ಗದ್ದಲ- ಗಲಾಟೆಗಳು, ಹಗರಣಗಳಿಂದ ಮನೆಮಾತಾಗಿ, ರಾಜಕೀಯ ಕೆಸರೆರಚಾಟದಲ್ಲಿ ಸಿಲುಕಿ‌ ಕಳೆದ ಐದು ವರ್ಷಗಳಿಂದ ನರಳಾಟ ನಡೆಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹಗರಣಗಳು, ಯಡವಟ್ಟಿನಿಂದಾಗಿ ಮಾನ್ಯತೆ ಕಳೆದುಕೊಂಡು ಐದು ವರ್ಷದಿಂದ ಐದು‌ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿ ದೂಡಿದ್ದ ವಿವಿಗೆ ಕೊನೆಗೂ ಮಾನ್ಯತೆ ಸಿಕ್ಕಿದೆ.

ಕೊನೆಗೂ ಕೆಎಸ್ಓಯು ಮುಕ್ತ ವಿವಿಗೆ ಮುಕ್ತಿ ಸಿಕ್ಕಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ದೊರೆತಿದೆ. ಮುಕ್ತ ವಿವಿಯ ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಮೂರು‌ ವರ್ಷದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು.

ಇಲ್ಲ ಸಲ್ಲದ ಕೋರ್ಸ್ ತೆರೆದಿರುವುದು, ರಾಜ್ಯ ಬಿಟ್ಟು ದೇಶ, ವಿದೇಶಗಳಲ್ಲೂ ಕೋರ್ಸ್ ಆರಂಭಿಸಿದ್ದು, ಸಿಕ್ಕ ಸಿಕ್ಕವರಿಗೆ ಅಂಕಪಟ್ಟಿ ಹಂಚಿದ್ದು, ಗುತ್ತಿಗೆಗಳಲ್ಲಿ ಲಂಚ ಪಡೆದದ್ದು, ಅಕ್ರಮ ನೇಮಕಾತಿ, ಅಕ್ರಮ ಪ್ರವೇಶಾತಿ ಸೇರಿ ಹತ್ತಾರು ವಿಷಯಗಳಲ್ಲಿ ಯುಜಿಸಿ ನಿಯಮ‌ ಉಲ್ಲಂಘಿಸಿದ್ದ ಮುಕ್ತ ವಿವಿಯ ಮಾನ್ಯತೆಯನ್ನ
2015 ರಲ್ಲಿ ಮಾನ್ಯತೆ ರದ್ದು ಮಾಡಿತ್ತು. ಅದರಲ್ಲೂ, 2013 ನೇಸಾಲಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿತ್ತು. ಇದರಿಂದಾಗಿ ಐದು ವರ್ಷಗಳ ಕಾಲ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಜ್ಞಾತ ವಾಸದಲ್ಲಿದ್ದರು.

31 ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಗ್ರೀನ್ ಸಿಗ್ನಲ್ ನೀಡಿದೆ. ಭೌಗೋಳಿಕ ವ್ಯಾಪ್ತಿ ಮೀರಿ ಕಾಲೇಜು ನಡೆಸಿ, ಪರೀಕ್ಷೆ ನಡೆಸುವುದಿಲ್ಲ ಎಂದು ಪ್ರಾಮಾಣಿಕರಿಸಿದ ಹಿನ್ನಲೆ ಮುಕ್ತ ವಿವಿಗೆ ಯುಜಿಸಿ‌ ಮಾನ್ಯತೆ ನೀಡಿದೆ.

2018-2019 ನೇ ಸಾಲಿನ ಪ್ರವೇಶಕ್ಕೆ ಅನುಮತಿ ನೀಡಿರುವ ಯುಜಿಸಿ ಹತ್ತು ಹಲವು ಶರತ್ತುಗಳನ್ನ ವಿಧಿಸಿದೆ. ಇದಕ್ಕೆಲ್ಲದ್ದಕ್ಕೂ ಯಸ್ ಎಂದು ಸಮ್ಮತಿ ಸೂಚಿಸಿರುವ ಕುಲಪತಿ ಶಿವಲಿಂಗಯ್ಯ ಮುಂದೆ ತಪ್ಪು ಹೆಜ್ಜೆ ಹಿಡುವುದಿಲ್ಲ ಎಂದು ಪ್ರಮಾಣೀಕರಿಸಿದ್ದಾರೆ.

ಸದ್ಯ ಮುಕ್ತ ವಿವಿ ಮಾನ್ಯತೆ ಸಿಕ್ಕಿರುವುದಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕ ರಾಮದಾಸ್‌ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.‌

Leave a Reply

Your email address will not be published.

Social Media Auto Publish Powered By : XYZScripts.com