ಕಲಬುರ್ಗಿ : ಶಾಲಾ ಬಸ್ ಅಪಘಾತ : 32ಮಕ್ಕಳ ಸ್ಥಿತಿ ಗಂಭೀರ…!

ಕಲಬುರ್ಗಿ : ಶಾಲಾ ಮಕ್ಕಳಿದ್ದ ಬಸ್ ಪಾಟಾ ಮುರಿದು ಅಪಘಾತಕ್ಕಿಡಾಗಿರುವ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಹೊರವಲಯದಲ್ಲಿ  ನಡೆದಿದೆ.

ಶಾಲೆ ಮುಗಿಸಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್  ಚಿಂಚೋಳಿಯಿಂದ ಬೋಗಲಿಂಗದಳ್ಳಿ ತಾಂಡಾಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ  ಸಂಭವಿಸಿದ್ದು ಬಸ್ ಬಳಗಿದ್ದ  32ಮಕ್ಕಳಿಗೆ ಗಂಭೀರ ಗಾಯಾಗಳಾಗಿದ್ದು. ಗಾಯಾಗೊಂಡಿರುವ ಮಕ್ಕಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

ಚಲಿಸುತ್ತಿರುವಾಗಲೇ ಪಾಟಾ ಮುರಿದಾಗ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ಬಸ್ ಪಲ್ಟಿಯಾಗುವದನ್ನು ಚಾಲಕನು ತಪ್ಪಿಸಿದ್ದನು. ಕೊತ್ತಲ ಬಸವೇಶ್ವರ ಸಂಸ್ಥೆಯ ಶರಣಬಸವೇಶ್ವರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳು ಎಂದು ತಿಳಿದುಬಂದಿದೆ. ಇನ್ನ ಈ ಘಟನೆಗೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com