ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬಿರುಕು..? : HDK ಕಟ್ಟಾ ಬೆಂಬಲಿಗರಿಂದ JDS ವಿರುದ್ಧ ವಾಗ್ದಾಳಿ..!

ಕೊಪ್ಪಳ : ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬಿರುಕು ಮೂಡಿದೆಯೇ ಎಂಬ ಅನುಮಾನ  ಹುಟ್ಟಿಸುವ ಘಟನೆಯೊಂದು  ನಡೆದಿದೆ. ಸಿಎಂ ಕುಮಾರಸ್ವಾಮಿ ಕಟ್ಟಾ ಬೆಂಬಲಿಗರು. ಬಹಿರಂಗ ಸಭೆಯಲ್ಲಿ ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಂಸದ, ಮಾಜಿ ಶಾಸಕರು ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯವರು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

‘ ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಜೆಡಿಎಸ್ ಬಿಜೆಪಿ ಪಕ್ಷಗಳು ಯಾವತ್ತಿದ್ರೂ ಕಾಂಗ್ರೆಸ್ ನ ವಿರೋಧಿಗಳು ಅಂತೆ. ಗಂಗಾವತಿಯಲ್ಲಿ ಜೆಡಿಎಸ್ ಬಂದ್ರೆ ದುರಾಡಳಿತ ನಡೆಯುತ್ತೆ. ಬಿಜೆಪಿಯನ್ನು ಗೆಲ್ಲಿಸೋ ಸಲುವಾಗಿ ಜೆಡಿಎಸ್ ಹುಟ್ಟಿಕೊಂಡಿದೆ. ಬಿಜೆಪಿಗೆ ಖೋ ಕೊಟ್ಟು ಜೆಡಿಎಸ್ ಮನೆಯಲ್ಲಿ ಕೂಡುತ್ತೆ. ಈ ಕಾರಣಕ್ಕೆ ಕಾಂಗ್ರೆಸ್ ನ್ನು ತಾವೆಲ್ಲರು ಬೆಂಬಲಿಸಬೇಕು ‘ ಎಂದು ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಂಸದ, ಮಾಜಿ ಶಾಸಕರ ವಾಗ್ದಾಳಿ ನಡೆಸಿದ್ದಾರೆ.

‘ ಜೆಡಿಎಸ್ ಟಿಕೆಟ್ ಭಾರೀ ಸುಲಭ ಸಿಗುತ್ತೆ. ಅದೇನು ದೊಡ್ಡ ಮಾತು ಅಲ್ಲ. ಆದರೆ ಎಲೆಕ್ಷನ್ ಆಗಿದ ಮೇಲೆ ಪಕ್ಷಕ್ಕೆ ಬಾಗಿಲು ಹಾಕ್ತಾರೆ ಇದು ಜೆಡಿಎಸ್ ಚಾಳಿ. ಜೆಡಿಎಸ್ ಪಕ್ಷವನ್ನು ನಂಬಬೇಡಿ ‘ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ. ಅನ್ಸಾರಿ ಹಾಗೂ ಶಿವರಾಮೇ ಗೌಡರ ವಾಗ್ದಾಳಿಯಿಂದ ಜೆಡಿಎಸ್ ಗೆ ಇರುಸು-ಮುರುಸು ಉಂಟಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com