ಬಿಜೆಪಿ ಒತ್ತಾಯದಿಂದ ಸಿಎಂ ಸಾಲ ಮನ್ನಾ ಮಾಡಿದ್ರು : ಕೆ ಎಸ್ ಈಶ್ವರಪ್ಪ

ಮಂಡ್ಯ : ಹೆಚ್ ಡಿ ಕುಮಾರಸ್ವಾಮಿ ಹೇಗೋ ಮುಖ್ಯಮಂತ್ರಿಯಾದರು, ಆದರೂ ಆದರೂ ಕುಮಾರಸ್ವಾಮಿ ಸಿಎಂ ಆಗಿ ಅಸಹಾಯಕರಾಗಿದ್ದಾರೆ, ಬಿಜೆಪಿ ಒತ್ತಾಯದಿಂದ ಸಿಎಂ ಸಾಲಮನ್ನಾ ಮಾಡಿದ್ರು. ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಈಶ್ವರಪ್ಪ,  ಕುಮಾರಸ್ವಾಮಿ ಪಕ್ಷದಲ್ಲಿ ಅವರಿಗೆ ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಸಿಎಂ ತಮ್ಮ ಘನತೆ, ಗೌರವ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ಸಾಲ ಮನ್ನಾ ಮಾಡಬೇಕು. ಇದು ಬಿಜೆಪಿ ಒತ್ತಾಯ ಎಂದು ಹೇಳಿದ್ರು. ವಿರೋಧ ಪಕ್ಷವಾಗಿ, ಪ್ರಣಾಳಿಕೆ ಜಾರಿಗೊಳಿಸೋವರೆಗೂ ಹೋರಾಟ ನಡೆಸುತ್ತೇವೆ. ನಾವು ನಿರುದ್ಯೋಗಿಗಳಲ್ಲ, ಹೋರಾಟಗಾರರು ಎಂದದು ಆಕ್ರೋಶ ವ್ಯಕ್ತಪಡಿಸಿದ್ದರು.

ನಿಮ್ಮಿಂದ ಕೆಲಸ ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೊರ ಬನ್ನಿ. ವಿಧಾನಸೌಧಕ್ಕೆ ಹೋದರೆ ಮಂತ್ರಿಗಳಿಗೆ ಏಜೆಂಟರುಗಳು ಹುಟ್ಟಿಕೊಂಡಿದ್ದಾರೆ.  ವರ್ಗಾವಣೆಯಲ್ಲಿ ಇಷ್ಟು ಭ್ರಷ್ಟಾಚಾರ ನಾನು ನೋಡಿಲ್ಲ. ಸಿಎಂ, ಯಾರು‌ ಎಷ್ಟು ಬೇಕಾದರೂ ಲೂಟಿ ಮಾಡಲಿ ಎಂಬ ಭಾವನೆಯಲ್ಲಿದ್ದಾರೆ. ಇರುವಷ್ಟು ದಿನ ಸಿಎಂ ಘನತೆ ಕಾಪಾಡುವ ಹಾಗೆ ಇರಲಿ. ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ರು.

Leave a Reply

Your email address will not be published.