ವರ್ಗಾವಣೆ ಮೈತ್ರಿ ಸರ್ಕಾರದ ಒಂದು ದಂಧೆಯಾಗಿದೆ : ಬಿ.ಎಸ್ ಯಡಿಯೂರಪ್ಪ

ಯಾದಗಿರಿ ಖಾಸಗಿ ಹೋಟೆಲ್‌ ನಲ್ಲಿ ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿದ್ದಾರೆ. ‘ ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಮಳೆ ‌ಕಡಿಮೆಯಾಗಿದೆ. ಜಿಲ್ಲೆಯಲ್ಲಿ ೧೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಮಠಕಲ್ ಮತಕ್ಷೇತ್ರದ ಕಡೇಚೂರ್ ಬಾಡಿಯಾಳದಲ್ಲಿ ಕೈಗಾರಿಕೆ ಆರಂಭಿಸಿಲ್ಲ. ವಡಗೇರಾ ತಾಲೂಕಿನ ಕೊನೆಭಾಗದ ರೈತರಿಗೆ‌ ನೀರು ಕಾಲುವೆ ಮುಖಾಂತರ ತಲುಪಿಸಲು ಆಗಿಲ್ಲ ‘ ಎಂದರು.

‘ ಇಂಜಿನಿಯರ್ ಕಾಲೇಜು, ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗಿಲ್ಲ. ಕಳೆದ ಮೂರು ತಿಂಗಳಿಂದ ಸಾಲ ಮನ್ನಾದ ವಿಷ ಚರ್ಚೆ ನಡೆದಿದೆ. ಆದ್ರೆ ರೈತರಿಗೆ ಮಾತ್ರ ಸಾಲಮನ್ನಾದ ಲಾಭ ಸಿಕ್ಕಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ‌ ಸಂಪೂರ್ಣ ಸ್ಥಗಿತವಾಗಿದೆ. ಹೊಸದಾಗಿ ಕಾಮಗಾರಿ ಮಾಡಲು ಗುತ್ತಿಗೆದಾರರು ಮುಂದೆ‌ ಬರುತ್ತಿಲ್ಲ ‘ ಎಂದಿದ್ದಾರೆ.

‘ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರಗಾಲವಿದೆ. ಆದರೂ ಸಿಎಂ ಅಗಲಿ, ಕೃಷಿ ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ. ವರ್ಗಾವಣೆ ಈ ಸರ್ಕಾರದ ಒಂದು ದಂಧೆಯಾಗಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮೌನವಾಗಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಸಮಿಶ್ರ ಸರ್ಕಾರದ ಸಚಿವರು ಒಂದು ಮಾತು ಅಡುತ್ತಿಲ್ಲ. ಪ್ರಧಾನಿ ಮೋದಿ ವಿಶ್ವವೇ ನೋಡುವಂತೆ ಅಭಿವೃದ್ಧಿ ಮಾಡುತ್ತಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.