ಬ್ಲೂ ವೇಲ್ ನಂತರ ಶುರುವಾಗಿದೆ Momo ಆತಂಕ : ಏನಿದು ವಾಟ್ಸಪ್ ಸೂಸೈಡ್ ಚಾಲೆಂಜ್..?

ಬ್ಲೂ ವ್ಹೇಲ್.. ನಿಮಗೆಲ್ಲ ಈ ಹೆಸರು ನೆನಪಿರಬಹುದು. ಕೆಲವಾರು ತಿಂಗಳುಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಈ ಮಾರಣಾಂತಿಕ ಆಟದ ಹೆಸರು ತುಂಬಾನೇ ಹರಿದಾಡಿತ್ತು. ಬ್ಲೂ ವ್ಹೇಲ್ ಚಾಲೆಂಜ್ ನ್ನು ಸ್ವೀಕರಿಸಿ ನೂರಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿತ್ತು. ಅವರಲ್ಲಿ ಬಹುಪಾಲು ಯುವಕರು, ವಿದ್ಯಾರ್ಥಿಗಳೇ ಆಗಿದ್ದರು.

Image result for blue whale game

 

ಬ್ಲೂ ವೇಲ್ ಗೇಮ್ ನಲ್ಲಿ ಭಾಗವಹಿಸುವವರಿಗೆ ಫೋನ್ ಮೂಲಕ 50 ದಿನಗಳವರೆಗೆ ದಿನವೂ ಒಂದೊಂದು ಬಗೆಯ ಟಾಸ್ಕ್ ಗಳನ್ನು ಮಾಡುವಂತೆ ಸೂಚನೆ ನೀಡಲಾಗುತ್ತಿತ್ತು. ಮೊದ ಮೊದಲು ಸರಳ ಹಾಗೂ ಆಸಕ್ತಿದಾಯಕ ಎನಿಸುತ್ತಿದ್ದ ಈ ಟಾಸ್ಕ್ ಗಳು ನಂತರ ಭಯಾನಕವಾಗುತ್ತ ಹೋಗುತ್ತಿದ್ದವು. ಬಳಿಕ ತಮ್ಮನ್ನೇ ತಾವು ಹಿಂಸಿಸಿಕೊಳ್ಳುಂತೆ ಸೂಚನೆಗಳು ಬರುತ್ತಿದ್ದವು, ಕೊನೆಯ ದಿನ ಎತ್ತರದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಲಾಗುತ್ತಿತ್ತು. ಇತ್ತೀಚೆಗೆ ಬ್ಲೂ ವೇಲ್ ಹಾವಳಿ ಕಡಿಮೆಯಾದಂತಾಗಿ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

Image result for momo whatsapp

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎನ್ನುವಂತೆ ಬ್ಲೂ ವೇಲ್ ನಂತಹುದೇ ಪ್ರಾಣಾಂತಿಕ ಆಟವೊಂದು ಬಂದು ಕೂತಿದೆ. ಅದರ ಹೆಸರು ‘ಮೊಮೊ ವಾಟ್ಸಾಪ್ ಸೂಸೈಡ್ ಚಾಲೆಂಜ್’ ಅಂತ. ಫೇಸ್ಬುಕ್ ಮೂಲಕ ಶುರುವಾದ ಈ ಆನ್ ಲೈನ್ ಚಾಲೆಂಜ್ ಇದೀಗ ವಾಟ್ಸಾಪ್ ನಲ್ಲಿ ಆವರಿಸಿಕೊಳ್ಳುತ್ತಿದೆ. ಇದಕ್ಕೆ ಭಯಾನಕ ಹಾಗೂ ವಿಕೃತ ಮುಖವುಳ್ಳ ಹೆಣ್ಣು ಗೊಂಬೆಯೊಂದರ ಮುಖವನ್ನು ಬಳಸಿಕೊಳ್ಳಲಾಗುತ್ತಿದೆ.

Image result for momo challenge

ಬ್ಲೂ ವೇಲ್ ಗೇಮ್ ನಂತೆಯೇ ಮೊಮೊ ಚಾಲೆಂಜ್ ಮೂಲಕ ಹದಿಹರೆಯದ ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು, ಸೂಸೈಡ್ ಮಾಡಿಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ. ಅಪರಿಚಿತ ವಾಟ್ಸಾಪ್ ಅಕೌಂಟ್ ಗಳ ಮೂಲಕ ನಿರ್ದೇಶನಗಳುಳ್ಳ ಸಂದೇಶ ಬರುತ್ತವೆ. ಅವುಗಳನ್ನು ಪಾಲಿಸಬೇಕೆಂದು ಸೂಚಿಲಾಗುತ್ತದೆ. ಒಂದು ವೇಳೆ ಪಾಲಿಸದಿದ್ದರೆ ಭಯಾನಕ, ಹಿಂಸಾತ್ಮಕ ಚಿತ್ರಗಳನ್ನು ಕಳಿಸಿ ಹೆದರಿಸಲಾಗುತ್ತದೆ. ಇದೆಲ್ಲ ಕೇವಲ ತಮಾಷೆ, ಚೇಷ್ಟೆಗಾಗಿ ಹಾಗೂ ಮಾಹಿತಿಯನ್ನು ಕದಿಯಲು ಈ ರೀತಿ ಮಾಡಲಾಗುತ್ತಿದೆ, ಆದರೂ ಮಕ್ಕಳ ಬಗ್ಗೆ ಪಾಲಕರು ಎಚ್ಚರಿಕೆಯಿಂದಿರಿ ಎಂದು ಸೈಬರ್ ಕ್ರೈಮ್ ಪರಿಣಿತರು ಹೇಳಿದ್ದಾರೆ.

Image result for momo whatsapp challenge

ಬ್ಲೂ ವೇಲ್ ಹೋದ ನಂತರ ನಿರಾಳರಾಗಿದ್ದ ಮಕ್ಕಳ ಪಾಲಕರಲ್ಲಿ ಮೊಮೊ ಚಾಲೆಂಜ್ ಆತಂಕ ಮೂಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಮೊಬೈಲ್, ಕಂಪ್ಯೂಟರ್ ಪರದೆ ಮೇಲಿನ ಸಂಗತಿಗಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸುವುದು ಒಳಿತು.

One thought on “ಬ್ಲೂ ವೇಲ್ ನಂತರ ಶುರುವಾಗಿದೆ Momo ಆತಂಕ : ಏನಿದು ವಾಟ್ಸಪ್ ಸೂಸೈಡ್ ಚಾಲೆಂಜ್..?

  • August 11, 2018 at 6:44 AM
    Permalink

    Hello friends. My name is John. I like to travel. Travelling is my hobby. Most of all I prefer to travel by air. It’s more comfortable, more convenient and far quicker than other methods. On the previous month, I traveled in Paris. Cruise premises more interesting impressions for a long time. I saw many beautiful beaches of the coast. To travel by sea, also is very interesting, exciting but simply marvelous. One of the most thrilling method of travelling is travelling on foot. I usually travel on foot for the purpose of discovering something new or in search of pleasure and adventure. It is very cheap. If you want to have speed, comfort and pleasure, travelling by train is absolutely for you. http://ledstk.com

    Reply

Leave a Reply

Your email address will not be published.

Social Media Auto Publish Powered By : XYZScripts.com