ನಾನು ಇನ್ನು ಮುಂದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ :  ಬಸವರಾಜ ರಾಯರೆಡ್ಡಿ 

ಬೆಂಗಳೂರು : ನಾನು ಇನ್ನು ಮುಂದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಕಳೆದ ವಿಧಾನಸಭೆ ಚುನಾವಣೆ ಸೋಲಿನಿಂದ ನಾನು  ನೊಂದಿದ್ದೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ  ಹೇಳಿದ್ದಾರೆ.

ಕೊಪ್ಪಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ,  ಕಳೆದ ಬಾರಿ ಚುನಾವಣೆಯ ಸೋಲು ನನ್ನನ್ನು ಕಂಗೆಡಿಸಿದೆ. ಹೀಗಾಗಿ ನನಗೀಗ ಎಂಎಲ್‍ಎ, ಎಂಪಿ ಯಾವ ಚುನಾವಣೆ ಮೇಲೂ ಆಸಕ್ತಿ ಇಲ್ಲ. ಸಂಸದನಾಗಿ ನಾನೇನು ಮಾಡಲಿ  ಎಂದು ಬೇಸರದ ಮಾತುಗಳನ್ನಾಡಿದರು ಸಚಿವ ಬಸವರಾಜ ರೆಡ್ಡಿ.

assembly-election-defeat-not-interested-mlas-mp-former-ministers

ನಾನು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಆದರೂ ಜನ ಮನ್ನಣೆ ನೀಡಲಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಕೆಲಸವೊಂದೇ ಮಾನದಂಡ ಅಲ್ಲ. ಬೇರೆ ಬೇರೆ ಕಾರಣಗಳಿಂದಲೂ ಚುನಾವಣೆ ಗೆಲ್ಲಲು ಸಾಧ್ಯವಿದೆ. ಇಷ್ಟು ದಿನ ಚುನಾವಣೆಯಲ್ಲಿ ಆಸಕ್ತಿ ಇತ್ತು.  ಈಗ ಅದು ಹೊರಟು ಹೋಗಿದೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com