ಉಡುಪಿ : ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ತಕ್ಕ ಪಾಠ ಕಲಿಸಿದ ಸ್ಥಳೀಯರು..!

ಉಡುಪಿ : ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ವಿದ್ಯುತ್ ಕಂಬಕ್ಕೆ ಕಟ್ಡಿ ಹಾಕಿ ಧರ್ಮದೇಟು ನೀಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಎಲ್ ಐಸಿ ರಸ್ತೆಯಲ್ಲಿ ನಡೆದಿದೆ.

ಯುವತಿಯರು ಮತ್ತು ಮಹಿಳೆಯರನ್ನು ಚುಡಾಯಿಸಿದ್ದಕ್ಕೆ ಮಹಿಳೆಯರೇ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಡಿ ಹಾಕಿ ಧರ್ಮದೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿನ ಸ್ಥಳೀಯ ನಿವಾಸಿ ಜಾವೇದ್  ಧರ್ಮದೇಟು ತಿಂದವನ್ನು, ಬಹಳ ದಿನಗಳಿಂದ ಇಲ್ಲಿನ ಎಲ್ ಐಸಿ ರಸ್ತೆಯಲ್ಲಿ ಯುವತಿಯರು ಮತ್ತು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಜಾವೇದ್ ಗೆ ಮಹಿಳೆಯರು ತಕ್ಕ ಪಾಠ ಕಲಿಸಿ, ಪೊಲೀಸರಿಗೊಪ್ಪಿಸಿದ್ದಾರೆ,ಈ ಘಟನೆಗೆ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com