ರಾಯರ ಸನ್ನಿಧಿಯಲ್ಲಿ ಹರಿಪ್ರಿಯಾ : ಕುಟುಂಬ ಸಮೇತ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಟಿ

ಚಿತ್ರ ನಟಿ ಹರಿಪ್ರಿಯಾ ಇಂದು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದ್ರು. ಕುಟುಂಬ ಸಮೇತ ನಿನ್ನೆ ರಾತ್ರಿಯೇ ಮಂತ್ರಾಲಯಕ್ಕೆ ಬಂದು, ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿ, ಗುರುವಾರ ಬೆಳಿಗ್ಗೆ ರಾಯರ ಸನ್ನಿಧಾನಕ್ಕೆ ಬಂದು ದರ್ಶನ ಪಡೆದರು.

ಭಕ್ತಿಯಿಂದ ಐದು ಸುತ್ತು ಬೃದಾವನ ಪ್ರದಕ್ಷಿಣೆ ಹಾಕಿದರು. ದರ್ಶನ‌ಮುಗಿಸಿ ಹರಿಪ್ರಿಯ ಮಠದಿಂದ ಹೊರ ಬರ್ತಿದಂತೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ‘ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಮಠಕ್ಕೆ ಬರಲು ಆಗಿರಲಿಲ್ಲ. ಈಗ ಕುಟುಂಬ ಸಮೇತ ಬಂದಿದ್ದೇವೆ, ಅಮ್ಮ, ಅಣ್ಣನಂದಿಗೆ ಮಠಕ್ಕೆ ಬಂದಿರುವೆ. ರಾಯರ ದರ್ಶನ ಪಡೆಸು ಖುಷಿ ಆಯ್ತು ‘ ಎಂದರು ಹರಿಪ್ರಿಯಾ.

ಇನ್ನು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ಅವರು, ‘ ಕುರುಕ್ಷೇತ್ರ, ಬೆಲ್ ಬಾಟಮ್, ಸೂಜಿದಾರ, ಡಾಕ್ಟರ್ ಆಫ್ ಪಾರ್ವತಮ್ಮ ಸೇರಿ ಹಲವು ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ‘ ಅಂದರು. ‘ ಬೆಲ್ ಬಾಟಲ್ ಸಿನಿಮಾ ಹಳೆ ಕಾಲದ ಚಿತ್ರದ ರೀತಿ ಇದೆ. ಇನ್ನು ಎರಡು ತಿಂಗಳಲ್ಲಿ ಬೆಲ್ ಬಾಟಮ್ ಸಿನಿಮಾ ರಿಲಿಸ್ ಆಗುತ್ತೆ. ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಸದ್ಯಕ್ಕೆ ಸಿನಿಮಾ, ಮದುವೆ ವಿಚಾರವಾಗಿ ಯಾವುದೇ ಮಾತು ಆಡಲ್ಲ ‘ ಅಂದರು.

Leave a Reply

Your email address will not be published.