Pakistan : ಗುಂಡಿಕ್ಕಿ ನಟಿ, ಗಾಯಕಿ ರೇಷ್ಮಾ ಹತ್ಯೆ : ಪತಿಯೇ ಕೃತ್ಯ ಎಸಗಿರುವ ಶಂಕೆ..

ನೆರೆ ರಾಷ್ಟ್ರ ಪಾಕಿಸ್ತಾನದ ಖ್ಯಾತ ನಟಿ, ಗಾಯಕಿ ರೇಷ್ಮಾ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೇರಾ ಕಲನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರೇಷ್ಮಾ ಪತಿಯೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಶಂಕಿತ ಕೊಲೆಗಾರ ಪತಿಯ ನಾಲ್ಕನೇ ಹೆಂಡತಿಯಾಗಿದ್ದ ರೇಷ್ಮಾ ತಮ್ಮ ಸೋದರನೊಂದಿಗೆ ನೌಶೇರಾ ಕಲನ್ ನಗರದ ಹಕೀಮ್ ಬಾದ್ ಪ್ರದೇಶದ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

‘ ರೇಷ್ಮಾ ವಾಸಿಸುತ್ತಿದ್ದ ಮನೆಯನ್ನು ಪ್ರವೇಶಿಸಿದ ಪತಿ ಆಕೆಯ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪತಿ – ಪತ್ನಿ ನಡುವಿನ ಕೌಟುಂಬಿಕ ಕಲಹ ಘಟನೆಗೆ ಕಾರಣವಿರಬಹುದು ‘ ಎಂದು ಪೋಲೀಸರು ತಿಳಿಸಿದ್ದಾರೆ.

 

Leave a Reply

Your email address will not be published.