‘ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ನಿಲುವು ಸ್ಪಷ್ಟ ಪಡಿಸಿ..’ : BJP ಕಾರ್ಯಕರ್ತನಿಂದ ಸಿಎಂಗೆ ಪತ್ರ..

ಮಂಡ್ಯ : ಅಕ್ರಮ ಬಾಂಗ್ಲಾ ವಸಿಗರ ವಿರುದ್ದ ತಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಮಂಡ್ಯದ ಬಿಜಿಪಿ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಮಂಡ್ಯದ ಬಿಜೆಪಿ ಕಾರ್ಯಕರ್ತ ಹಾಗು ಮೋದಿ ವಿಚಾರ್ ಮಂಚ್ ವೇದಿಕೆಯ ಕಾರ್ಯದರ್ಶಿ ಸಿ.ಟಿ. ಮಂಜುನಾಥ್ ಅವರು ಪತ್ರ ಬರೆದಿದ್ದಾರೆ.

‘ 2015ರಲ್ಲಿ ಆಗಿನ ಸಿ.ಎಂ.‌ಸಿದ್ರಾಮಯ್ಯ ಗೆ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ದ ಪ್ರಶ್ನೆ ಮಾಡಿದ್ದ ಕುಮಾರಸ್ವಾಮಿ. ಇದೀಗ ರಾಜ್ಯದ ವಿವಿದೆಡೆ ಹಲವು ಬಾಂಗ್ಲಾ ವಲಸಿಗರು ಇರುವ ಬಗ್ಗೆ ವರದಿ ಇದೆ. ಅಲ್ದೆ ಮೊನ್ನೆಯಷ್ಟೆ ಸಿ.ಎಂ. ತವರು ಕ್ಷೇತ್ರ ರಾಮನಗರದಲ್ಲಿ ಬಾಂಗ್ಲ ಉಗ್ರ ಸೆರೆ ಸಿಕ್ಕಿದ್ದಾನೆ. ಈಗ ನೀವು ಸಿ.ಎಂ. ಆಗಿದ್ದೀರಿ ಈಗಲಾದ್ರು ನೀವು ಅಕ್ರಮ ಬಾಂಗ್ಲಾ ವಸಿಗರ ಬಗ್ಗೆ ತಮ್ಮ ನಿಲುವು ತಿಳಿಸಿ ‘ ಎಂದು ಪ್ರಶ್ನೆ ಮಾಡಿ ಪತ್ರ ಬರೆಯಲಾಗಿದೆ.

‘ ರಾಜ್ಯವನ್ನು ಭಯೋತ್ಪಾದಕ ರಾಜ್ಯ ಮಾಡಲು ಹೊರಟ ಅಕ್ರಮ ಬಾಂಗ್ಲಾ ವಲಸಿಗರಿನ್ನು ನಿಷೇಧಿಸಿ ರಾಷ್ಟ ಮತ್ತು ರಾಜ್ಯ ರಕ್ಷಿಸಿ ‘ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com