ಕನ್ನಡ ಭಾಷೆಯನ್ನು ಯುನೆಸ್ಕೊ ಬುಕ್ ಆಫ್ ರೆಕಾರ್ಡ್​ಗೆ ಸೇರಿಸಲು ವೀರಪ್ಪ ಮೊಯ್ಲಿ ಒತ್ತಾಯ..

ಕನ್ನಡ ಭಾಷೆಯನ್ನು ಯುನೆಸ್ಕೊ ಬುಕ್ ಆಫ್ ರೆಕಾರ್ಡ್​ಗೆ ಸೇರಿಸಲು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯಿಲಿ ಸಂಸತ್ ನಲ್ಲಿ ನಡೆಯುತ್ತಿರುವ ಮಳೆಗಾಲದ ಅಧೀವೇಶನದಲ್ಲಿ ಒತ್ತಾಯಿಸಿದ್ದಾರೆ. ಸಂವಿಧಾನದಲ್ಲಿರುವ 14 ಭಾಷೆಗಳಲ್ಲಿ ಕನ್ನಡವೂ ಸ್ಥಾನ ಪಡೆದಿದೆ ಹೀಗಾಗಿ ಇದನ್ನು ಯುನೆಸ್ಕೋ ಬುಕ್​ ಆಫ್​ ರೆಕಾರ್ಡ್​ಗೆ ಸೇರಿಸಬೇಕೆ ಎಂದು ಅವರು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕನ್ನಡ ಭಾಷೆಯ ಪರವಾಗಿ ಧ್ವನಿ ಎತ್ತಿದ ಸಂಸದ ವೀರಪ್ಪ ಮೊಯಿಲಿ ಅವರು ಕನ್ನಡ ಭಾಷೆ ಕ್ರಿ.ಶ. 450ರಿಂದ ಅಸ್ತಿತ್ವದಲ್ಲಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಬಾಷೆಗಳ ಪೈಕಿ ಕನ್ನಡವೂ ಒಂದಾಗಿದೆ. ಹಾಗಾಗಿ ಕನ್ನಡ ಭಾಷೆಯನ್ನು ಯುನೆಸ್ಕೊ ಬುಕ್ ಆಫ್ ರೆಕಾರ್ಡ್​ಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಮೂಲಕ ವೀರಪ್ಪ ಮೊಯಿಲಿಯವರು ಕನ್ನಡದ ಪರವಾಗಿ ಧ್ವನಿ ಎತ್ತಿ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಗೆ ಸುಮಾರು ಒಂದು ಸಾವಿರ ವರ್ಷವನ್ನು ಮೀರಿದ ಇತಿಹಾಸವಿದೆ. ಪ್ರಾಚೀನ ಹಳೆಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹಬ್ಬಿಕೊಂಡಿದೆ. ಅಲ್ಲದೇ ಸಂವಿಧಾನದಲ್ಲಿ ಮಾನ್ಯತೆ ಪಡೆದ 14 ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವೂ ಒಂದು. ಇದರೊಂದಿಗೆ ಕೆಲ ವರ್ಷಗಳ ಹಿಂದೆ ಯುನೆಸ್ಕೋ ತಂಡ ವಿಶ್ವದ ಜೀವಂತ ಭಾಷೆಗಳ ಸರ್ವೆ ಮಾಡಿತ್ತು.

ಆಗ ಜಗತ್ತಿನ ಜೀವಂತ 20 ಭಾಷೆಗಳ ಸಾಲಿನಲ್ಲಿ ಕನ್ನಡ ಸಹ ಒಂದು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಹೀಗಿದ್ದರೂ ಇದಕ್ಕೆ ಯುನೆಸ್ಕೋ ಬುಕ್​ ಆಫ್​ ರೆಕಾರ್ಡ್​ ನೀಡದಿರುವುದು ಕನ್ನಡಿಗರಿಗೆ ಬೇಸರದ ವಿಚಾರವಾಗಿದೆ.ಅಷ್ಟಕ್ಕೂ ಯುನೆಸ್ಕೋ ಬುಕ್​ ಆಫ್​ ರೆಕಾರ್ಡ್ ಅಂದ್ರೆ ಏನು?ಯುನೆಸ್ಕೋ ಇದು ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗವಾಗಿದ್ದು, ಕೆಲ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಭಾಷೆ, ತಾಣ ಮೊದಲಾದುವುಗಳನ್ನು ಗುರುತಿಸಿ ವಿಶ್ವ ಮಾನ್ಯತೆ ನೀಡುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com