BJPಯವರಿಗೆ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚೋದು ಬಿಟ್ಟು ಏನೂ ಗೊತ್ತಿಲ್ಲ : ಸಿದ್ದರಾಮಯ್ಯ

ಸಿದ್ದರಾಮಯ್ಯ ಪಾಕಿಸ್ತಾನಿ ಎಂಬ ಈಶ್ವರಪ್ಪ ಹೇಳಿಕೆ ಮಾಜಿ ಸಿಎಮ್ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ‘ ಈಶ್ವರಪ್ಪನಿಗೆ ಸಂವಿಧಾನ ಗೊತ್ತಿಲ್ಲ, ಈ ದೇಶದ ಸಮಾಜಿಕ ವ್ಯವಸ್ಥೆ ಗೊತ್ತಿಲ್ಲ. ಅಂತಹವರ ಬಗ್ಗೆ ಏನ್ ಹೇಳಬೇಕು ಕನಿಷ್ಠ ಜ್ಞಾನ ಇಲ್ಲದವರಿಗೆ ಕಾನೂನು ಗೊತ್ಯಿಲ್ಲದವರಿಗೆ, ಬೆಂಕಿ ಹಚ್ಚುವವರಿಗೆ ಪ್ರಶ್ನೆಗೆ ಉತ್ತರಿಸಬಾರದು ‘ ಎಂದು ಖಡಕ್ ತಿರುಗೇಟು ನೀಡಿದರು.

ಇನ್ನು ಬಳ್ಳಾರಿ ಉಸ್ತುವಾರಿಯನ್ನು ಡಿಕೆಶಿಗೆ ಕೊಟ್ಟಿದ್ದಾರೆ,ಡಿಕೆಶಿಗೆ ಜನಾರ್ದನ ರೆಡ್ಡಿ ಪರಿಸ್ಥಿತಿ ಬರಲಿದೆ ಎಂಬ ಎಸ್ ಆರ್ ಹಿರೆಮಠ ಹೇಳಿಕೆಗೆ ತಿರುಗೇಟು ನೀಡಿ, ಎಸ್. ಆರ್ ಹಿರೆಮಠ ಸುಮ್ಮನೆ ಹೇಳುತ್ತಾರೆ. ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಸಮರ್ಥವಾಗಿ ಕೆಲಸ ಮಾಡುವವರಿಗೆ ಉಸ್ತುವಾರಿ ಕೊಟ್ಟಿದ್ದಾರೆ ‘ ಎಂದು ಸ್ಪಷ್ಟವಾಗಿ ಉತ್ತರಿಸಲು ನಿರಾಕರಿಸಿದರು.

‘ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಬಿಜೆಪಿಯವರು ಹೇಗಾದರೂ ಮಾಡಿ ಹಿಂಬಾಗಿಲಿಂದ ಅಧಿಕಾರಕ್ಕೆ ಬರಬೇಕೆಂತ ಮಾಡ್ತಿದ್ದಾರೆ. ಇದರಲ್ಲಿ ಸಫಲ ಆಗೋದಿಲ್ಲ, ಅವರಿಗೆ ಮೊದಲೇ ಮುಖಭಂಗ ಆಗಿದೆ ಯಡಿಯೂರಪ್ಪ ಮೂರೇ ದಿನ ಮುಖ್ಯಮಂತ್ರಿ ಆಗಿ ಕೆಳಗಿರೋದೆ ಇದಕ್ಕೆ ಉದಾಹರಣೆ ಎಂದರು. ಜೊತೆಗೆ ನಮ್ಮ ಕಾಂಗ್ರೆಸ್ ನವರು ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿದ್ದಾರೆ ‘ ಎಂದರು.
ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಿದೆ ‘ ಎಂದರು.

‘ ಬಿಜೆಪಿಯವರು ಜೆಡಿಎಸ್ ನವರು ನಾವು ಮಾಡಿದ್ದೇವೆ ಎಂದು ಹೇಳಬಹುದು ಬಿಜೆಪಿಯವರು ಮೀಸಲಾತಿ ವಿರೋಧಿಗಳು ಬರಿ ಹಿಂದುತ್ವ ಬಗ್ಗೆ ಮಾತನಾಡೋರು ಅವರಿಗೆ ಹಿಂದುಳಿದವರಿಗೆ, ಮಹಿಳೆಯರಿಗೆ ಅಧಿಕಾರ ಕೊಡಬಾರದೆಂಬ ಉದ್ದೇಶವಿದೆ ಎಂದರು. ಇನ್ನು ಈ ವಿಚಾರದಲ್ಲಿ ಜೆ ಡಿ ಎಸ್ ಬಗ್ಗೆ ಮಾತನಾಡೋದಿಲ್ಲ ಅದು ಅನಗತ್ಯ ಎಂದು ಜೆ ಡಿ ಎಸ್ ಬಗ್ಗೆ ಮಾತನಾಡದೆ ವ್ಯಂಗ್ಯ ಮಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯಿಲ್ಲ ಜೆ ಡಿ ಎಸ್ ಜೊತೆ ಪ್ರೆಂಡ್ಲಿ ಪೈಟ್ ಬಿಜೆಪಿ ಜೊತೆ ಜಿದ್ದಾಜಿದ್ದಿನ ಪೈಟ್ ‘ ಎಂಡರು.

‘ ನಮಗೆ ಮೊದಲ ರಾಜಕೀಯ ವೈರಿ ಬಿಜೆಪಿ ಆದರೆ ವ್ಯಯಕ್ತಿಕವಾಗಿ ನಾವು ವಿರೋಧಿಗಳಲ್ಲ ಎಂದ ಸಿದ್ದರಾಮಯ್ಯ ರಾಜಕೀಯ ವೈರಿ ಬಿಜೆಪಿ ಯನ್ನು ಸೋಲಿಸಬೇಕೊ ಬೇಡವೊ? ಎಂದು ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದರು. ನರೇಂದ್ರ ಮೋದಿ ಏನಾದರೂ ಮಾಡಿದಾರಾ..? ಏನು ಮಾಡಿಲ್ಲ ಹೇಳಿದ್ದೇ ಹೇಳಿದ್ದು ಮನ್ ಕಿ ಬಾತ್ ಮನ್ ಕಿ ಬಾತ್ ಅಂತ‌ ಎಂದ ಸಿದ್ದರಾಮಯ್ಯ, ಏನೂ ಮಾಡದೆ ಇರೋರಿಗೆ ಓಟ್ ಹಾಕಿ ನಮ್ಮನ್ನು ಮನೆಗೆ ಕಳಿಸಿದ್ರಿ ಇದ್ಯಾವ ನ್ಯಾಯ ‘ ಎಂದು ಅಸಮಾಧಾನ ಹೊರಹಾಕಿದರು.

‘ ಸುಮ್ಮನೆ ಜಾತಿ ಮಾಡೋದು ಹಿಂದು ಮುಸ್ಲಿಮ್ ಜಗಳ ಹಚ್ಚೋದು ಬಿಜೆಪಿಯವರ ಕಾರ್ಯ ಹಿಂದು ವಿರೋಧಿ ಸಿದ್ದರಾಮಯ್ಯ ಅಂತ ಹೇಳುತ್ತಾರೆ. ನಾನು ಹಿಂದು ಅಲ್ಲವೋ ನನ್ನ ಹೆಸರು ಜಾರ್ಜ್ ಅಂತಿದೆಯಾ, ರಹೀಮ್ ಖಾನ್ ಅಂತಿದೆಯಾ? ಎಂದ ಮಾಜಿ ಸಿಎಮ್ ಖಾಯಿಲೆ ಬಂದರೆ ನಾನೇನು ಕುರುಬರ ರಕ್ತವೇ ಹಾಕು ಅಂತಿನಾ ಯಾವುದೇ ರಕ್ತ ಹಾಕಿ ಬದುಕಿಸಿ ಅಂತಿನಿ. ಆದರೆ ಬಿಜೆಪಿಯವರು ಜಾತಿ ಜಾತಿ ಅಂತಾರೆ, ಜಾತಿ ಮಾಡಿ ಸಮಾಜ ಒಡೆಯುತ್ತಾರೆ ಅವರ ಬಗ್ಗೆ ಎಚ್ಚರವಿರಬೇಕು. ಎಮ್ ಎಲ್ ಎ ಚುನಾವಣೆಯಲ್ಲಿ ಬಿಜೆಪಿಯವರು ಜನರ ದಾರಿ ತಪ್ಪಿಸಿದ್ದಾರೆ ಈ ಬಾರಿ ದಾರಿ ತಪ್ಪಬೇಡಿ ‘ ಎಂದರು.

‘ ನನ್ನ ಜೊತೆ ಕಾಂಗ್ರೆಸ್ ನವರನ್ನು ಆಯ್ಕೆ ಮಾಡಿ ಬೇರೆಯವರನ್ನು ಆಯ್ಕೆ ಮಾಡಿದರೆ ಎತ್ತು ಏರಿಗೆ ಕೋಣ ನೀರಿಗೆ ಎಳೆದಂತಾಗುತ್ತದೆ ಎಂದರು.ಜೊತೆಗೆ ನಾನು ಐದು ವರ್ಷಗಳಲ್ಲಿ ನಿಮ್ಮ ಋಣ ತೀರಿಸುತ್ತೇನೆ ಬಾದಾಮಿ ಕ್ಷೇತ್ರದ ಎಲ್ಲ ಕೆರೆ ತುಂಬಿಸುತ್ತೇನೆ. ಎಲ್ಲ ರಸ್ತೆ ಸುಧಾರಿಸುತ್ತೇನೆ. ಸ್ಥಳೀಯ ಸಂಸ್ಥೆ, ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗರಿಗೆ ಒಂದು ಓಟ್ ಹಾಕಬಾರದು ‘ ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published.