ಹುಬ್ಬಳ್ಳಿ, ಧಾರವಾಡ ರಾಜ್ಯದಲ್ಲಿ ಒಂದು ಮಾದರಿ ನಗರಗಳಾಗುತ್ತವೆ : ಯು ಟಿ ಖಾದರ್

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ರಾಜ್ಯದಲ್ಲಿ ಒಂದು ಮಾದರಿ ನಗರಗಳು ಆಗುತ್ತವೆ, ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವಳಿನಗರ ಅಭಿವೃದ್ಧಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯಾದ್ಯಂತ ೬೩ ಸಾವಿರ ಮನೆ ನಿರ್ಮಾನ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಇಲಾಖೆಯಿಂದ ರೂಪಿಸಲಾಗಿದ್ದು, ಅಗಸ್ಟ್ ೧೨ ರಂದು ೬೩ ಸಾವಿರ ಮನೆ ನಿರ್ಮಾಣ ಕಾರ್ಯಕ್ಕೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಯು ಟಿ ಖಾದರ್ ತಿಳಿಸಿದ್ದಾರೆ.

Related image

ಅವಳಿ ನಗರ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿ ಮುಗಿಯು ಹಂತದಲ್ಲಿದೆ, ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗುತ್ತೆ, ಒಂದುವೇಳೆ ಕಾಮಗಾರಿ ಪೂರ್ಣಗೊಳಿಸದೆ ಇದಲ್ಲಿ ಗುತ್ತಿಗೆದಾರ, ಇಂಜನಿಯರ್​ಗಳು ಸಂಪೂರ್ಣ ಹೊಣೆ ಮಾಡಲಾಗುವುದು. ನವೆಂಬರ್ ೧ ರಂದು ಬಿಆರ್‌ಟಿಎಸ್ ಬಸ್‌ಗಳು ಅವಳಿನಗರ ಮಧ್ಯೆ ಓಡಾಡುತ್ತವೆ, ಈ ಕುರಿತು ಬಿಆರ್‌ಟಿಎಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವಳಿನಗರ ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನಕ್ಕೆ ಬಂದಿದೆ. ಕಾಮಗಾರಿಯನ್ನು ಪೂರ್ಣ ಮಾಡದಲ್ಲಿ ಆ ಗುತ್ತಿಗೆದಾರನನ್ನು ಬ್ಲ್ಯಾಕ್ ಲೀಸ್ಟ್‌ಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೆ ವೇಳೆ ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರ ಬಗ್ಗೆ ಮಾತನಾಡಿದ ನಗರಾಭಿವೃಧಿ ಸಚಿವ ಯು.ಟಿ ಖಾದರ್,  ​ ನಮ್ಮ ಹಿರಿಯರು ಅಖಂಡ ಕರ್ನಾಟಕವನ್ನು ಕಟ್ಟಿ ಕೊಟ್ಟಿದ್ದಾರೆ. ಅಖಂಡ ಕರ್ನಾಟಕ ಇರಬೇಕು ಎನ್ನುವುದು ನಮ್ಮ ಆಸೆ, ಮಂತ್ರಿಸ್ಥಾನ ಸಿಗದಿದಕ್ಕೆ ಪ್ರತ್ಯೇಕ ರಾಜ್ಯ ಕೇಳುವುದು ರಾಜ್ಯಕ್ಕೆ ಮಾಡುವ ದ್ರೋಹ. ಪ್ರತ್ಯೇಕ ಕರ್ನಾಟಕ ಕೇಳುವುದು ಸರಿಯಲ್ಲ, ಒಂದೇ ಕರ್ನಾಟಕ, ಒಂದೇ ಕನ್ನಡಿಗರು ಎಂದ್ರು.

 

Leave a Reply

Your email address will not be published.