ಮೈತ್ರಿ ಸರ್ಕಾರದ ಮಂತ್ರಿಗಳು ವರ್ಗಾವಣೆಯ ಕಮಿಷನ್ ಏಜೆಂಟ್ ಗಳಾಗಿದ್ದಾರೆ : ಕೆ.ಎಸ್ ಈಶ್ವರಪ್ಪ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ‘ ರಾಜ್ಯದ ಇತಿಹಾಸದಲ್ಲೆ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಇಷ್ಟೊಂದು ಆಗಿಲ್ಲ. ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್ ಗಳಾಗಿದ್ದಾರೆ. ಚಾಮುಂಡಿ ಸನ್ನಿಧಾದಲ್ಲಿ ನಿಂತು ನಾನು ಈ ಮಾತನ್ನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಸಿಎಂ ಕಣ್ಮುಂಚಿ ಕುಳಿತು ಕೊಂಡಿರುವುದು ಒಳ್ಳೆಯದಲ್ಲ ‘ ಎಂದಿದ್ದಾರೆ.

‘ ಎಲ್ಲಾ ಹಂತದ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯಲಾಗುತ್ತಿದೆ. ಅಧಿಕಾರಿಗಳಿಗೆ ಯಾವ ಕ್ಷಣದಲ್ಲಿ ಈ ಸರಕಾರ ಬೀಳುತ್ತೋ, ಯಾವ ಕ್ಷಣದಲ್ಲಿ ನಮ್ಮ ವರ್ಗಾವಣೆ ಆಗುತ್ತೋ ಎಂಬ ಆತಂಕದಲ್ಲಿದ್ದಾರೆ. ನಾವಾಗಿ ನಾವು ಕಾಂಗ್ರೆಸ್ ಶಾಸಕರನ್ನು ಸರಕಾರ ಬೀಳಿಸೋಣಾ ಬನ್ನಿ ಅಂತಾ ಕರೆಯಲ್ಲ.
ಬಿಜೆಪಿ ಕರೆದ ಕೂಡಲೇ ನಮ್ಮ ಜೊತೆ ಬರುವಷ್ಟು ಕಾಂಗ್ರೆಸ್ ಶಾಸಕರು ಆದಷ್ಟು ದುರ್ಬಲರಾ? ‘ ಎಂದು ಕೇಳಿದ್ದಾರೆ.

‘ ನಮ್ಮ ಒಬ್ಬ ಶಾಸರಕರನ್ನು ಮುಟ್ಟಿ ನೋಡೋಣಾ. ಬಿಜೆಪಿ ಅವರು ಸಿಂಹ ರೂಪದ ಶಾಸಕರು. ಅವರ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೆ ನಂಬಿಕೆ ಇಲ್ಲ.
ಇಂಥಹ ಸರಕಾರ ಉಳಿಯುತ್ತಾ? ಕಾಂಗ್ರೆಸ್ ಶಾಸಕರು ಮಾರಾಟದ ವಸ್ತುಗಳಾಗಿದ್ದಾರೆ ಅಂಥಾ ಕಾಂಗ್ರೆಸ್ ಅಧ್ಯಕ್ಷರು ಡಿಕೆಶಿ ಹೇಳುತ್ತಿದ್ದಾರೆ.
ರಾಜ್ಯದ ಜೆಡಿಎಸ್ – ಕಾಂಗ್ರೆಸ್ ಶಾಸಕರು ದುರ್ಬಲರು ‘ ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

One thought on “ಮೈತ್ರಿ ಸರ್ಕಾರದ ಮಂತ್ರಿಗಳು ವರ್ಗಾವಣೆಯ ಕಮಿಷನ್ ಏಜೆಂಟ್ ಗಳಾಗಿದ್ದಾರೆ : ಕೆ.ಎಸ್ ಈಶ್ವರಪ್ಪ

Leave a Reply

Your email address will not be published.

Social Media Auto Publish Powered By : XYZScripts.com