ಮೈತ್ರಿ ಸರ್ಕಾರ ರಚನೆಗೆ ಕೋಟಿ ಕೋಟಿ ವೆಚ್ಚ..? : RTI ನಲ್ಲಿ ಮಾಹಿತಿ ಬಹಿರಂಗ..!

ಮಂಡ್ಯ : ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೆ ಕೋಟಿ ಕೋಟಿ ವೆಚ್ಚ ಮಾಡಲಾಗಿರುವ ಮಾಹಿತಿ RTIನಲ್ಲಿ ಬಹಿರಂಗವಾಗಿದೆ. ಮೇ 23ರಂದು ನಡೆದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪ್ರಮಾಣವಚನದ ಸಂದರ್ಭದಲ್ಲಿ ಕೋಟಿಗಿಂತಲೂ ಹೆಚ್ಚು ವೆಚ್ಚ ಭರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಜೂನ್ 6ರಂದು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನ ಸೌಧ ಸಿಬ್ಬಂದಿಯ ಅತಿಥಿಗಳ ವಸತಿ, ಊಟ-ತಿಂಡಿಗೆ ಕೋಟಿ ವ್ಯಯಿಸಲಾಗಿದೆ. ಎರಡೂ ಕಾರ್ಯಕ್ರಮಗಳಿಗೆ ಖರ್ಚಾಗಿದ್ದು 1ಕೋಟಿ 52ಲಕ್ಷದ 4 ಸಾವಿರದ 400 ರೂಪಾಯಿ ಖರ್ಚು ಮಾಡಲಾಗಿದೆ.

ಮಂಡ್ಯದ ಜೆಡಿಯು ಜಿಲ್ಲಾಧ್ಯಕ್ಷ ಬಿ. ಎಸ್.ಗೌಡ ಅವರು ಮಾಹಿತಿ ಹಕ್ಕಿನಡಿ ದಾಖಲೆಯನ್ನು ಬಹಿರಂಗಪಡಿಸಿದ್ದಾರೆ.

4 thoughts on “ಮೈತ್ರಿ ಸರ್ಕಾರ ರಚನೆಗೆ ಕೋಟಿ ಕೋಟಿ ವೆಚ್ಚ..? : RTI ನಲ್ಲಿ ಮಾಹಿತಿ ಬಹಿರಂಗ..!

Leave a Reply

Your email address will not be published.

Social Media Auto Publish Powered By : XYZScripts.com