ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಹಗಲು ದರೋಡೆ ನಡೆಯುತ್ತಿದೆ : BSY

ಬೀದರ್ : ‘ ರಾಜ್ಯದಲ್ಲಿ ಸಾಲ ಮನ್ನಾ ಎಲ್ಲಿ ಆಗಿದೆ. ಸಾಲ ಮನ್ನಾ ಮಾಡುತ್ತೇವೆ ಅಂತಾ ಹೇಳಿಕೊಂಡು ಅಧಿಕಾರಕ್ಕೆ ಬರುತ್ತಿದ್ದಾರೆ. ಅವರು ಯಾವುದೇ ಸ್ಪಷ್ಟನಿರ್ಧಾರ ತಗೆದುಕೊಂಡಿಲ್ಲಾ ‘ ಎಂದು ಬೀದರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

‘ ರಾಷ್ಟ್ರೀಕೃತ ಬ್ಯಾಂಕ್ ರಿಜರ್ವ ಬ್ಯಾಂಕ್ ಇಂಡಿಯಾ ಇನ್ನು ಅಲ್ಲೇ ಇದೆ. ಕೋ ಆಪರೇಟಿವ್ ಲೋನ್ ಮನ್ನ ಮಾಡಬಹುದು ಅದು ಸಹ ಇನ್ನು ಸರ್ಕಾರ ಸ್ಪಷ್ಟಪಡೆಸಿಲ್ಲಾ, ಹೀಗಾಗಿ ಮತ್ತೆ ಸಾಲ ಮನ್ನಾ ಬೇಡುವ ದುಸ್ಥಿತಿಗೆ ಬಂದು ತಲುಪಿದೆ ‘ ಎಂದಿದ್ದಾರೆ.

ರಾಹುಲ್ ಗಾಂಧಿಗೂ ನನಗೆ ಎನು ಸಂಭಂದ..? ರಾಹುಲ್ ಗಾಂಧಿ ಬೀದರ್ ಗೆ ಬಂದಾಗ ಇಲ್ಲಿನ ಹಗರಣದ ಬಗ್ಗೆ ಗಮನಕೊಡಲಿ. ಬ್ರಿಮ್ಸ್ ಹಗರಣ ಎನಿದೆ ಅನೇಕ ಸಂಗತಿಗಳಿವೆ ಅದಕ್ಕೆ ಗಮನ ಕೊಟ್ಟು ಕಿವಿ ಹಿಂಡಿ ಬುದ್ದಿ ಹೇಳಿದ್ರೆ ಬಂದು ಹೋಗಿದ್ದಕ್ಕೂ ಸಾರ್ಥಕವಾಗುತ್ತೆ ‘ ಎಂದಿದ್ದಾರೆ.

‘ ಕಾಂಗ್ರೇಸ್ ಜೆಡಿಎಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಒಂದು ರೀತಿ ಹಗಲು ದರೋಡೆ ನಡೆಸುತ್ತಿದ್ದಾರೆ. ಒಂದು ವೇಳೆ ಅದನ್ನ ತಡೆಯಲು ಮುಂದಾದ್ರೆ ಅವರ ಪ್ರವಾಸ ಸಾರ್ಥಕವಾಗುತ್ತೆ ‘ ಎಂದು ಬೀದರ್ ನಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com