ನಾನು ಆಪರೇಷನ್ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ : ಬಿ ಎಸ್ ಯಡಿಯೂರಪ್ಪ…!

ಬೆಂಗಳೂರು :  ನಾನು ದೆಹಲಿಗೆ ಆಪರೇಷನ್ ಕಮಲ ಮಾಡೋಕಲ್ಲ. ಇಷ್ಟಕ್ಕೂ ನಾನು ಆಪರೇಷನ್ ಕಮಲ ಮಾಡಲ್ಲ, ಅದರ ಅಗತ್ಯವೂ ನನಗಿಲ್ಲ ತುರ್ತು ಸಭೆ ಇದ್ದ ಕಾರಣ ನಾನು ದೆಹಲಿಗೆ ಹೊಗಿದ್ದೆ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿ ತಮ್ಮ ನಿವಾಸದಲ್ಲಿ  ಸುದ್ದಿಗಾರರೊಡನೆ ಮಾತನಾಡಿದ ಯಡಿಯೂರಪ್ಪ, ನಾನು ಆಪರೇಷನ್ ಕಮಲ ಮಾಡೋದಿಲ್ಲ ಅದರ ಅವಶ್ಯಕತೆನೂ ನನಗಿಲ್ಲ ಎಂದು ಡಿಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಅವರುಗಳ ಹೇಳಿಕೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಡನೆ ರಾಜ್ಯದ ಪ್ರಸಕ್ತ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ತುರ್ತು ಸಭೆ ಇದ್ದು ಅದರಲ್ಲಿ ಭಾಗವಹಿಸಲು ನಾನು ದೆಹಲಿಗೆ ತೆರಳಿದ್ದೆ. ನಾವು ವಿರೋಧ ಪಕ್ಷದವರಾಗಿದ್ದುಕೊಂಡು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸದ ಕುರಿತಂತೆ ಕೇಂದ್ರ ಸಚಿವರೊಡನೆ ಮಾತುಕತೆ ನಡೆಸಿದ್ದೇನೆ ಎಂದ ಯಡಿಯೂರಪ್ಪ ನಾಳೆಯಿಂದಲೇ ನಮ್ಮ ಪಕ್ಷದ ನಾಯಕರು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಬೀದರ್ ಜಿಲ್ಲೆಯಿಂದ ಈ ಪ್ರವಾಸ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದೂ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com