ಟೀಮ್ ಇಂಡಿಯಾ ಜೊತೆ ಕೊಹ್ಲಿ ಪತ್ನಿ ಅನುಷ್ಕಾ ಪೋಸ್ : BCCI ಮೇಲೆ ಫ್ಯಾನ್ಸ್ ಗರಂ..!

ಲಂಡನ್ ನಗರದಲ್ಲಿರುವ ಭಾರತದ ಉನ್ನತ ಆಯೋಗ ಮಂಗಳವಾರ ಟೀಮ್ ಇಂಡಿಯಾ ಆಟಗಾರರನ್ನು ಕಚೇರಿಗೆ ಆಹ್ವಾನಿಸಿತ್ತು. ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ ಸೇರಿದಂತೆ ಆಟಗಾರರು, ಕೋಚ್ ರವಿ ಶಾಸ್ತ್ರಿ ಹಾಗೂ ತಂಡದ ಸಿಬ್ಬಂದಿ ವರ್ಗ ಲಂಡನ್ನಿನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಗೆ ಭೇಟಿ ನೀಡಿತ್ತು.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತಂಡದ ಸದಸ್ಯರ ಜೊತೆಗಿದ್ದರು. ಭೇಟಿಯ ವೇಳೆ ಕ್ಲಿಕ್ಕಿಸಲಾಗಿರುವ ಚಿತ್ರವೊಂದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಪತಿ ಕೊಹ್ಲಿ ಪಕ್ಕದಲ್ಲಿಯೇ, ಮುಂದಿನ ಸಾಲಿನಲ್ಲಿ ನಿಂತು ಪೋಸ್ ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಮುಗಿಯುವವರೆಗೂ ಟೀಮ್ ಇಂಡಿಯಾ ಆಟಗಾರರ ಪತ್ನಿ ಅಥವಾ ಗರ್ಲ್ ಫ್ರೆಂಡ್ಸ್ ತಂಡದ ಜೊತೆಗೆ ಪಯಣಿಸಬಾರದು ಎಂದು ಬಿಸಿಸಿಐ ಪ್ರತಿಬಂಧ ಹೇರಿದೆ. ಹೀಗಿದ್ದರೂ ಕೂಡ ಅನುಷ್ಕಾ ಶರ್ಮಾ ತಂಡದ ಜೊತೆಗಿರುವುದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ‘ ಕೊಹ್ಲಿ ಪತ್ನಿಗೆ ಮಾತ್ರ ಬಿಸಿಸಿಐ ನಿಯಮಗಳಿಂದ ವಿಶೇಷ ವಿನಾಯಿತಿ ಏಕೆ..? ‘ ಎಂದು ಪ್ರಶ್ನಿಸಿ ಬಿಸಿಸಿಐ ಅನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published.