ಲಾರ್ಡ್ಸ್ ಟೆಸ್ಟ್ ಗೂ ಮುನ್ನ ಕೊಹ್ಲಿಗೆ ಸಚಿನ್ ಕಿವಿಮಾತು : ಮಾಸ್ಟರ್ ಬ್ಲಾಸ್ಟರ್ ಹೇಳಿದ್ದೇನು..?

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಆಗಸ್ಟ್ 9 ರಿಂದ ಕ್ರಿಕೆಟ್ ಕಾಶಿಯೆಂದೇ ಹೆಸರಾದ ಲಾರ್ಡ್ಸ್ ಅಂಗಳದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 31 ರನ್ ಗಳಿಂದ ಜಯಭೇರಿ ಬಾರಿಸಿತ್ತು. ಎಡ್ಜ್ ಬಾಸ್ಟನ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಟ್ಟು 200 ರನ್ ಗಳಿಸಿದ್ದರು.

ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ದಾಖಲಿಸಿದ್ದ ವಿರಾಡ್, 149 ರನ್ ಬಾರಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಕೊಹ್ಲಿ 51 ರನ್ ಗಳಿಸಿದ್ದರು. ಗುರುವಾರದಿಂದ ಶುರುವಾಗಲಿರುವ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

Related image

‘ ಉತ್ತಮ ಪ್ರದರ್ಶನ ತೋರುವುದನ್ನು ಹೀಗೆಯೇ ಮುಂದುವರೆಸು ಎಂದು ಹೇಳಬಯಸುತ್ತೇನೆ. ಕೊಹ್ಲಿ ಪ್ರದರ್ಶನ ನಿಜಕ್ಕೂ ಅದ್ಭುತವಾಗಿದೆ. ನಿನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚಿಂತಿಸಬೇಡ. ನೀನು ಸಾಧಿಸಬೇಕೆಂದುಕೊಂಡಿರುವದರ ಮೇಲೆಯೇ ಸಂಪೂರ್ಣ ಲಕ್ಷ್ಯವಿರಲಿ. ಯಾವಾಗಲೂ ನಿನ್ನ ಹೃದಯದ ಮಾತನ್ನು ಅನುಸರಿಸು ‘ ಎಂದು ಸಚಿನ್ ಹೇಳಿದ್ದಾರೆ.

Image result for sachin kohli

‘ ರನ್ ಗಳಿಕೆಯ ಬಗ್ಗೆ ಸಂತೋಷಪಡಬೇಕು, ಆದರೆ ಒಬ್ಬ ಬ್ಯಾಟ್ಸಮನ್ ಆಗಿ ಯಾವತ್ತೂ ರನ್ ಗಳಿಕೆಯ ಬಗ್ಗೆ ತೃಪ್ತಿ ಹೊಂದಬಾರದು. ತೃಪ್ತನಾಗಿಬಿಟ್ಟರೆ ಅಧಃಪತನ ಶರುವಾಗುತ್ತದೆ, ಹೆಚ್ಚು ಹೆಚ್ಚು ರನ್ ಗಳಿಕೆಯ ಹಸಿವು ನಿರಂತರವಾಗಿರಲಿ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com